Friday, September 18, 2026

BDA Apartments

ಅಧಿಕಾರಿಗಳ ಜೊತೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ವಿಚಾರ: ಸಚಿವ ರಾಮಲಿಂಗರೆಡ್...
Home Front Page ಅಧಿಕಾರಿಗಳ ಜೊತೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ವಿಚಾರ: ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ.

ಅಧಿಕಾರಿಗಳ ಜೊತೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ವಿಚಾರ: ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ.

ಬೆಂಗಳೂರು,ಜೂನ್,14,2023(www.justkannada.in): ಅಧಿಕಾರಿಗಳ ಜೊತೆ  ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸಭೆ ನಡೆಸಿದ್ದಾರೆ ಎಂಬ ಬಿಜೆಪಿ  ಆರೋಪಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ  ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ನಿನ್ನೆ ಕಾಫಿ ಕುಡಿದು ಹೋದೆವು ಅಷ್ಟೇ, ಯಾವುದೇ ಚರ್ಚೆ ಆಗಿಲ್ಲ. ಸಭೆ ಬಗ್ಗೆ ಯಾವುದೇ ಪೂರ್ವ ನಿಯೋಜನೆ ಆಗಿಲ್ಲ. ಬಿಜೆಪಿಯವರು  ರಾಜ್ಯಪಾಲರಿಗೆ ದೂರು ಕೊಡಲಿ ಬಿಡಿ, ಈಗ ಅವರು ವಿರೋಧ ಪಕ್ಷದಲ್ಲಿದ್ದಾರೆ. ಬಿಜೆಪಿ ನಾಯಕರು ಹಿಂದೆ ಮಾಡಿದ್ದನ್ನು ಮರೆತು ಹೋಗಿದ್ದಾರೆ. ನಾವು ಅಧಿಕಾರಕ್ಕೆ ಬಂದು ಇನ್ನೂ 20 ದಿನ ಆಗಿಲ್ಲ. ಬಿಜೆಪಿಯವರನ್ನು ಜನ ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಸರ್ಕಾರದ ತಪ್ಪುಗಳಿದ್ದರೆ ಬಿಜೆಪಿಯವರು ತಿದ್ದುವ ಕೆಲಸ ಮಾಡಲಿ ಎಂದು ಹೇಳಿದರು.ಅಧಿಕಾರಿಗಳ ಜೊತೆ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ವಿಚಾರ ramalingareddy

ಕಾಂಗ್ರೆಸ್​, ಬಿಜೆಪಿಯಿಂದ ಹೊಂದಾಣಿಕೆ ರಾಜಕಾರಣ ಆರೋಪ  ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗರೆಡ್ಡಿ, ಕಾಂಗ್ರೆಸ್, ಬಿಜೆಪಿ‌ ಎಣ್ಣೆ ಸೀಗೆಕಾಯಿ ಇದ್ದಂತೆ. ಸಿ.ಟಿ ರವಿ ಸೋತಿದ್ದಾರೆ, ಹೊಟ್ಟೆ ಹುರಿಗೆ ಏನೋನೋ ಮಾತಾಡ್ತಾರೆ. ಬಿಜೆಪಿಯವರ ಬಳಿ ನಾವು ಯಾಕೆ ಒಪ್ಪಂದ ಮಾಡಿಕೊಳ್ಳೋಣ? ನಾವು ಜನರ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.

Key words: Randeep Singh Surjewala-meeting –officials-Minister-Ramalingareddy