Tuesday, October 6, 2026

BDA Apartments

immense respect BDA JK_Adv BDA Adv
Home Front Page ಬೇರೆ ರಾಜ್ಯಗಳಲ್ಲೂ ಉಚಿತ ಪ್ರಯಾಣ ಇದೆ: ನಾವು ನೀಡಿದ ಭರವಸೆ ಈಡೇರಿಸಲು ಬದ್ಧ-ಸಚಿವ ರಾಮಲಿಂಗರೆಡ್ಡಿ.

ಬೇರೆ ರಾಜ್ಯಗಳಲ್ಲೂ ಉಚಿತ ಪ್ರಯಾಣ ಇದೆ: ನಾವು ನೀಡಿದ ಭರವಸೆ ಈಡೇರಿಸಲು ಬದ್ಧ-ಸಚಿವ ರಾಮಲಿಂಗರೆಡ್ಡಿ.

ಬೆಂಗಳೂರು,ಜೂನ್,1,2023(www.justkannada.in):  ಬೇರೆ ರಾಜ್ಯಗಳಲ್ಲೂ ಉಚಿತ ಪ್ರಯಾಣ ಇದೆ, ಇಲ್ಲೂ ಆಗುತ್ತೆ. ಚುನಾವಣೆ ವೇಳೆ ನಾವು ನೀಡಿದ ಭರವಸೆ ಈಡೇರಿಸಲು ಬದ್ಧ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ, ಬೇರೆ ಬೇರೆ ರಾಜ್ಯಗಳಲ್ಲೂ ಬಸ್​ನಲ್ಲಿ ಉಚಿತ ಪ್ರಯಾಣ ಇದೆ. ತಮಿಳುನಾಡು, ಮಹಾರಾಷ್ಟ್ರ, ದೆಹಲಿಯಲ್ಲೂ ಉಚಿತ ಪ್ರಯಾಣ ಇದೆ. ಎಲ್ಲಾ ರಾಜ್ಯದ ಮಾದರಿಗಳನ್ನೂ ನಾವು ತರಿಸಿಕೊಂಡಿದ್ದೇವೆ. ಉಚಿತ ಪ್ರಯಾಣ ಬಗ್ಗೆ ಈಗಾಗಲೇ ಚರ್ಚೆ ಕೂಡ ಮಾಡಿದ್ದೇವೆ. ಚುನಾವಣೆ ವೇಳೆ ನಾವು ನೀಡಿದ ಭರವಸೆ ಈಡೇರಿಸಲು ಬದ್ಧ ಎಂದರು.

ಗ್ಯಾರಂಟಿ ವಿಚಾರದಲ್ಲಿ ವಿಪಕ್ಷದವರು ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ನಾಳೆ ಸಂಪುಟ ಸಭೆ ಬಳಿಕ ಸಿಎಂ ಎಲ್ಲಾ ಮಾಹಿತಿ ನೀಡುತ್ತಾರೆ ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: Free- travel – other -states – our promise-Minister Ramalingareddy