Friday, August 21, 2026

BDA Apartments

Home Front Page ನಮ್ಮ ಆಡಳಿತದಲ್ಲಿ ಕೇಸರ ಶಾಲು ಪ್ರಯೋಗವಾಗಿಲ್ಲ- ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ.

ನಮ್ಮ ಆಡಳಿತದಲ್ಲಿ ಕೇಸರ ಶಾಲು ಪ್ರಯೋಗವಾಗಿಲ್ಲ- ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ.

ಮಂಗಳೂರು,ಮೇ,24,2023(www.justkannada.in): ನಿನ್ನೆ ಸಭೆಯಲ್ಲಿ ಕೇಸರಿ ಶಾಲಿನ ಕುರಿತು ಪೊಲೀಸ್ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಕೋಟಾಶ್ರೀನಿವಾಸ ಪೂಜಾರಿ,  ನಮ್ಮ ಆಡಳಿತದಲ್ಲಿ ಕೇಸರಿ ಶಾಲು ಪ್ರಯೋಗವಾಗಿಲ್ಲ.  ರಾಜ್ಯದಲ್ಲಿ ಕೇಸರಿ ಶಾಲು ನಿಷೇಧ  ಇಲ್ಲ ವೈಯಕ್ತಿಕ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಕಾಂಗ್ರಸ್ ಸರ್ಕಾರ ದ್ವೇಷ ಮಾಡುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದಿಂದ 40ಪರ್ಸೆಂಟ್ ಕಮಿಷನ್ ತನಿಖೆ ಮಾಡಿಸುವುದಾಗಿ ಹೇಳಿರುವ ಬಗ್ಗೆ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ.   ಸಿಎಂ ಸಿದ್ಧರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಮುಕ್ತವಾಗಿ ತನಿಖೆ ಮಾಡಲಿ. ತನಿಖೆಯನ್ನ ಮುಕ್ತವಾಗಿ ಸ್ವಾಗತ ಮಾಡುತ್ತೇನೆ ಎಂದರು.

ನಿನ್ನೆ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದ ಡಿಕೆ ಶಿವಕುಮಾರ್, ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲು ಹಾಕುತ್ತೀರಿ ಅಂದರೆ ಹೇಗೆ? ಪೊಲೀಸ್ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ? ಎಂದು ಗರಂ ಆಗಿದ್ದರು.

Key words: Kesar Shalu – our –administration-Former minister -Kota Srinivas Pujari.