Saturday, August 15, 2026

BDA Apartments

Home Front Page ನಿವೃತ್ತರಾಗಿ ಎನ್ನುವ ಮೋದಿ ರಾಜಕೀಯ ಬಿಡ್ತಾರಾ..? ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್.

ನಿವೃತ್ತರಾಗಿ ಎನ್ನುವ ಮೋದಿ ರಾಜಕೀಯ ಬಿಡ್ತಾರಾ..? ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್.

ಹುಬ್ಬಳ್ಳಿ,ಮೇ,11,2023(www.justkannada.in): ನರೇಂದ್ರ ಮೋದಿ ಅವರು ನಾಲ್ಕು ಬಾರಿ ಸಿಎಂ ಎರಡು ಬಾರಿ ಪ್ರಧಾನಿಯಾಗಿದ್ದಾರೆ.  ಅವರು ಈಗ ರಾಜಕೀಯ ಬಿಡ್ತಾರಾ..? ಅದು ಸಾಧ್ಯವಿಲ್ಲ ಇನ್ನೊಮ್ಮೆ ಪ್ರಧಾನಿಯಾಗಲು ಪ್ರಯತ್ನ ಮಾಡುತ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಜಗದೀಶ್ ಶೆಟ್ಟರ್, ನಾನು ಏನೋ ಆಗಬೇಕೆಂಬ ಆಸೆಯಿಂದ ಕಾಂಗ್ರೆಸ್ ಸೇರಿಲ್ಲ.  ನಾನು ಸಚಿವಸ್ಥಾನದ ಆಕಾಂಕ್ಷಿಯಲ್ಲ. ಬಿಜೆಪಿಯವರು ಮಾಡಿದ ಮೋಸದಿಂದ ಕಾಂಗ್ರೆಸ್ ಸೇರಿದೆ ಶಾಸಕನಾದರೆ ಮನಸ್ಸಿಗೆ ಸಮಾದಾನ ಆಗುತ್ತೆ. ಮೋದಿ 4 ಬಾರಿ ಸಿಎಂ ಆಗಿದ್ದರು. ಈಗ ಪ್ರಧಾನಿ ಆಗಿದ್ದಾರೆ ಮೋದಿ  ಅಧಿಕಾರ ಬಿಡ್ತಾರಾ ಅದು ಸಾಧ್ಯವಿಲ್ಲ ಮೋದಿ ಇನ್ನೊಮ್ಮೆ ಪಿಎಂ ಆಗಲು ಪ್ರಯತ್ನ ಮಾಡುತ್ತಾರೆ.  ಜನಾರ್ಶೀವಾದ ಇರುವವರೆಗೂ ರಾಜಕೀಯದಲ್ಲಿ ಇರಬೇಕು ಎಂದರು.

ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಜನರಿಗೆ ಬೇಸರ ಮೂಡಿಸಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಲಿಲ್ಲ. ಮೀಸಲಾತಿ ಅನುಷ್ಠಾನ ಮಾಡಲ್ಲ ಅಂತಾ ಕೋರ್ಟ್​ಗೆ ಹೇಳಿದ್ರು. ಉತ್ತರ ಕರ್ನಾಟಕದವರೇ ಸಿಎಂ ಆದರೂ ಅಭಿವೃದ್ಧಿ ಮಾಡಿಲ್ಲ. ಸಿಎಂ ಬೊಮ್ಮಾಯಿ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿಲ್ಲ ಎಂದು ಜಗದೀಶ್ ಶೆಟ್ಟರ್ ಕಿಡಿಕಾರಿದರು.

Key words: Will -Modi -retire – politics- Former CM -Jagdish Shettar- Tong.