Thursday, August 20, 2026

BDA Apartments

Home Front Page ‘ಕೈ’ ಮುಖಂಡರ ಮನೆ ಮೇಲೆ ಐಟಿ ದಾಳಿ ವಿಚಾರ: ಕಾಂಗ್ರೆಸ್ ಆರೋಪಕ್ಕೆ ಸಿಎಂ ಬೊಮ್ಮಾಯಿ ಟಾಂಗ್.

‘ಕೈ’ ಮುಖಂಡರ ಮನೆ ಮೇಲೆ ಐಟಿ ದಾಳಿ ವಿಚಾರ: ಕಾಂಗ್ರೆಸ್ ಆರೋಪಕ್ಕೆ ಸಿಎಂ ಬೊಮ್ಮಾಯಿ ಟಾಂಗ್.

ಹುಬ್ಬಳ್ಳಿ,ಮೇ,8,2023(www.justkannada.in): ಚುನಾವಣೆ ಹೊತ್ತಿನಲ್ಲಿ  ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿಯಾಗುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲಿ ತಪ್ಪು ನಡೆಯುತ್ತೆ ಅಂತಾ ಐಟಿಗೆ ಮಾಹಿತಿ ಇರುತ್ತೆ.  ಕಾಂಗ್ರೆಸ್ ನಾಯಕರು ತಪ್ಪು ಮಾಡಿದ್ರೆ ನಾವೇನ್ ಮಾಡೋಣ . ಮೊದಲು ತಪ್ಪು ಮಾಡುವುದನ್ನ ಕಾಂಗ್ರೆಸ್ ಬಿಡಲಿ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದ ವಿರದ್ದ ಭ್ರಷ್ಟಾಚಾರ ಆರೋಪ ಮಾಡಿದ ಕಾಂಗ್ರೆಸ್ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ,  ಕಾಂಗ್ರಸ್ ನವರು ದಾಖಲೆ ಇದ್ರೆ ಕೊಡಬೇಕು ನಮ್ಮ ವಿರುದ್ದ ಭ್ರಷ್ಟಾಚಾರ ಕೇಸ್ ಇಲ್ಲ ಕಾಂಗ್ರೆಸ್ ನವರ ಮೇಲೆ ಕೇಸ್ ಇದೆ. ಹೀಗಾಗಿ ಯಾವ ನೈತಿಕತೆಯಿಂದ ನಮ್ಮನ್ನ ಪ್ರಶ್ನಿಸುತ್ತಿದ್ದಾರೆ…? ಎಂದು ಕುಟುಕಿದರು.

Key words: CM-Basavaraja bommai-tong- congress