Friday, October 9, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಮತ್ತೆ ಸಂಪುಟ ವಿಸ್ತರಣೆ: ಇಬ್ಬರಿಗೆ ಸಚಿವ ಸ್ಥಾನ..?

ಮತ್ತೆ ಸಂಪುಟ ವಿಸ್ತರಣೆ: ಇಬ್ಬರಿಗೆ ಸಚಿವ ಸ್ಥಾನ..?

ಬೆಂಗಳೂರು,ಆ,26,2019(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮೊದಲ ಹಂತದ ಸಚಿವ ಸಂಪುಟ ರಚನೆಯಾಗಿದ್ದು ಮತ್ತೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.

ನಾಡಿದ್ದು ಅಂದರೆ ಆಗಸ್ಟ್ 28ರಂದು ಮತ್ತೆ ಸಚಿವ ಸಂಪುಟ ವಿಸ್ತರಣೆಯಾಗಿ ಇಬ್ಬರು ಶಾಸಕರು ಬಿಎಸ್ ವೈ ಸಂಪುಟ ಸೇರಲಿದ್ದಾರೆಂದು ವರದಿಯಾಗಿದೆ.  ನಾಳೆಯೇ ಸಂಪುಟ ವಿಸ್ತರಣೆಗೆ  ದಿನಾಂಕ ನಿಗದಿಯಾಗಿತ್ತು. ಆದರೆ ನಾಳೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್ ಅವರು ಪದಗ್ರಹಣ ಮಾಡಲಿದ್ದಾರೆ. ಹೀಗಾಗಿ ಬಿಜೆಪಿಯ ಹೈಕಮಾಂಡ್ ನಾಳೆ ಎರಡನೇ ಸುತ್ತಿನ ಸಚಿವ ಸಂಪುಟ ವಿಸ್ತರಣೆಗೆ ಬ್ರೇಕ್ ಹಾಕಿದೆ ಎನ್ನಲಾಗುತ್ತಿದೆ.

ಇನ್ನು ಬುಧವಾರ ಬೆಳಿಗ್ಗೆ 11 ಗಂಟೆಗೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಈಗಾಗಲೇ ಸಚಿವ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಶಾಸಕರ ಪೈಕಿ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಕಾದು ನೋಡಬೇಕು. ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಶಾಸಕ ರಾಜುಗೌಡ ಸೇರಿ ಹಲವು ಶಾಸಕರು ರೇಸ್ ನಲ್ಲಿದ್ದಾರೆ.

Key words: bjp government -Expanding – Cabinet –again