Tuesday, October 6, 2026

BDA Apartments

Mysore Dasara BDA JK_Adv BDA Adv
Home Front Page ನಮ್ಮೂರಲ್ಲಿ ಗಲಾಟೆ ಶುರು ಮಾಡಿದ್ದೇ ಬಿಜೆಪಿ- ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ.

ನಮ್ಮೂರಲ್ಲಿ ಗಲಾಟೆ ಶುರು ಮಾಡಿದ್ದೇ ಬಿಜೆಪಿ- ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ.

ರಾಯಚೂರು,ಏಪ್ರಿಲ್,28,2023(www.justkannada.in): ಸಿದ‍್ಧರಾಮನಹುಂಡಿಯಲ್ಲಿ ಕಾಂಗ್ರೆಸ್ –ಬಿಜೆಪಿ ಕಾರ್ಯಕರ್ತರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನಮ್ಮೂರಲ್ಲಿ ಗಲಾಟೆ ಶುರು ಮಾಡಿದ್ದೇ ಬಿಜೆಪಿ ಎಂದು ಆರೋಪಿಸಿದ್ದಾರೆ.

ಗಲಾಟೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಸೋಮಣ್ಣ ದೂರು ಕೊಡ್ತಾರಾ . ನಮ್ಮವರೂ ಕೊಡ್ತಾರೆ. ಆರೋಪ  ಮಾಡಲು ಪ್ರತಾಪ್ ಸಿಂಹ ಯಾರು..?  ಬಿಜೆಪಿ ಪ್ರಚಾರ ವೇಳೆ ನಮ್ಮ ಪರ ಯಾರೋ ಕೂಗಿದ್ದಾರೆ. ಬಿಜೆಪಿಯವರು ಯಾಕೆ ಗಲಾಟೆ ಮಾಡಬೇಕಿತ್ತು. ನಮ್ಮೂರಲ್ಲಿ ಗಲಾಟೆ ಶುರು ಮಾಡಿದ್ದೇ ಬಿಜೆಪಿ. ಇದುವರೆಗೂ ನಮ್ಮೂರಲ್ಲಿ ಗಲಾಟೆ ಆಗಿರಲಿಲ್ಲ, ಯಾವ ಪಕ್ಷದವರು ಬಂದರೂ ನಮ್ಮ ಊರಿನ ಜನ ಇದುವರೆಗೂ ಗಲಾಟೆ ಮಾಡಿಲ್ಲ. ಮತಗಳಿಕೆಯ ರಾಜಕಾರಣಕ್ಕಾಗಿ ಅವರೇ ಗಲಾಟೆ ಮಾಡಿಸಿದ್ದಾರೆ ಎಂದು ಕಿಡಿಕಾರಿದರು.ನಮ್ಮೂರಲ್ಲಿ ಗಲಾಟೆ ಶುರು ಮಾಡಿದ್ದೇ ಬಿಜೆಪಿ- ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ...

ಗ್ಯಾರಂಟಿ ಕಾರ್ಡ್ ಬಗ್ಗೆ ಪ್ರಧಾನಿ ಮೋದಿ ಟೀಕೆ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಹತಾಶೆಯಿಂದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಬಹಳ ಲಘುವಾಗಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ಹತಾಶೆಯಿಂದ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೇವೆ. 160 ಅಂಶಗಳಲ್ಲಿ 158 ಭರವಸೆ ಈಡೇರಿಸಿದ್ದೇವೆ. ಆದರೆ ರಾಜ್ಯದಲ್ಲಿ ಬಿಜೆಪಿ 600 ಭರವಸೆ ನೀಡಿತ್ತು, ಇದುವರೆಗೂ 55 ಮಾತ್ರ ಈಡೇರಿಸಿದ್ದಾರೆ ಎಂದು ಟಾಂಗ್ ನೀಡಿದರು.

Key words: BJP -start –uproar-siddaramanahundi-Former CM-Siddaramaiah