Friday, August 14, 2026

BDA Apartments

Home Front Page ಪಂಚರತ್ನ ಯೋಜನೆ ಜಾರಿ ಮಾಡಲು ನಮ್ಮ ಹೋರಾಟ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.

ಪಂಚರತ್ನ ಯೋಜನೆ ಜಾರಿ ಮಾಡಲು ನಮ್ಮ ಹೋರಾಟ- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.

ತುಮಕೂರು,ಏಪ್ರಿಲ್,24,2023(www.justkannada.in):  ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಪಂಚರತ್ನ ಯೋಜನೆ ಜಾರಿ ಮಾಡಲು ನಮ್ಮ ಹೋರಾಟ ನಡೆಯುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದರು.

ಶಿರಾದಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ ಹೇಳಿದ ಕಡೆ ನಾನು ಪ್ರಚಾರ ಮಾಡುತ್ತೇನೆ. ಕುಮಾರಸ್ವಾಮಿ ಆಸ್ಪತ್ರೆಯಲ್ಲಿದ್ದಾರೆ, ಅದೆಲ್ಲ ದೇವರ ಇಚ್ಛೆ. ಅವರು ಮತ್ತೆ ಪ್ರಚಾರ ಮಾಡುತ್ತಾರೆ. ಪಂಚರತ್ನ ಯೋಜನೆ ಜಾರಿ ಮಾಡಲು ಹೋರಾಟ ಮಾಡುತ್ತಿದ್ದೇವೆ. ಮುಸ್ಲಿಂ ಮುಖಂಡರು ಜೆಡಿಎಸ್​​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮುಸ್ಲಿಂ ಸಮಾಜವನ್ನು ಬಿಟ್ಟುಕೊಟ್ಟಿಲ್ಲ, ಬಿಟ್ಟುಕೊಡುವುದು ಇಲ್ಲ ಎಂದರು.

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾರೆ. ಆದರೆ ಅವರು ಈಗ ಹೋರಾಟ ಮಾಡುತ್ತಿರುವುದು ಪಂಚರತ್ನ ಯೋಜನೆಯ ಅನುಷ್ಠಾನ ಮಾಡುವ ಸಲುವಾಗಿ ಎಂದರು.

ಮಧುಗಿರಿಯಲ್ಲಿ ಮಾತನಾಡಿದ ಹೆಚ್.ಡಿ ದೇವೇಗೌಡರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದುಕೊಂಡಿರಲಿಲ್ಲ. ಚುನಾವಣಾ ರಾಜಕೀಯ ಸಾಕಾಗಿದೆ ಅಂತಾ ಹಿಂದೆಯೇ ಹೇಳಿದ್ದೆ. ಕೆಲವು ಮುಖಂಡರು ನನ್ನನ್ನು ಬಲಿಪಶು ಮಾಡಿದ್ರು ಅಂತಾ ಹೇಳಲ್ಲ. ಅವರ ಹೆಸರೂ ಕೂಡ ಹೇಳೋಕೆ ಹೋಗಲ್ಲ ಎಂದು ಹೆಚ್​ಡಿ ದೇವೇಗೌಡ ಎಂದರು.

Key words: Our struggle – implement -Pancharatna Yojana-Former PM-HD Deve Gowda.