Sunday, August 2, 2026

BDA Apartments

Home Front Page ಇಂದು ಸಂಜೆ ಬಿಜೆಪಿಗೆ ರಾಜೀನಾಮೆ: ಬಳಿಕ ಡಿಕೆಶಿ, ಸಿದ್ಧರಾಮಯ್ಯ ಭೇಟಿ ಮಾಡುವೆ- ಮಾಜಿ ಡಿಸಿಎಂ ಲಕ್ಷ್ಮಣ್...

ಇಂದು ಸಂಜೆ ಬಿಜೆಪಿಗೆ ರಾಜೀನಾಮೆ: ಬಳಿಕ ಡಿಕೆಶಿ, ಸಿದ್ಧರಾಮಯ್ಯ ಭೇಟಿ ಮಾಡುವೆ- ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ.

ಬೆಂಗಳೂರು,ಏಪ್ರಿಲ್,14,2023(www.justkannada.in): ಅಥಣಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಈಗಾಗಲೇ ಬಿಜೆಪಿ ತೊರೆಯಲು ನಿರ್ಧರಿಸಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಇಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, ಇಂದು ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ.  ಸಂಜೆ 4 ಗಂಟೆಗೆ ಸಭಾಪತಿಯನ್ನ ಭೇಟಿಯಾಗಿ ರಾಜೀನಾಮೆ ಪತ್ರ ನೀಡುತ್ತೇನೆ. ರಾಜೀನಾಮೆ ನೀಡಿದ ಬಳಿಕ ಡಿ.ಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯರನ್ನ ಭೇಟಿಯಾಗುವೆ ಎಂದಿದ್ದಾರೆ.

ಅಥಣಿ ಕ್ಷೇತ್ರದಲ್ಲಿ ಟಿಕೆಟ್ ಕೊಡಲಿಲ್ಲ.  ಟಿಕೆಟ್ ನೀಡಿಲ್ಲ ಎಂದರೆ ಅಲ್ಲಿ ಯಾಕೆ ಇರಬೇಕು. ಬಿಜೆಪಿ ಯಾವ ನಾಯಕರನ್ನೂ ಭೇಟಿ ಮಾಡಲ್ಲ.  ಮನೆ ಬಿಟ್ಟು  ಹೋಗುವ  ಹೊತ್ತಿನಲ್ಲಿ ಯಾಕೆ ಭೇಟಿಯಾಗಲಿ ಎಂದು ಲಕ್ಷ್ಮಣ್ ಸವದಿ ಹೇಳಿದರು.

Key words: Resignation – BJP –  Former DCM -Laxman Savadi.