Wednesday, October 7, 2026

BDA Apartments

immense respect BDA JK_Adv BDA Adv
Home Front Page ವರುಣಾದಿಂದ ಸ್ಪರ್ಧಿಸಿ ಗೆದ್ದು ತೋರಿಸುತ್ತೇನೆ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ರಘು ಆಚಾರ್.

ವರುಣಾದಿಂದ ಸ್ಪರ್ಧಿಸಿ ಗೆದ್ದು ತೋರಿಸುತ್ತೇನೆ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ರಘು ಆಚಾರ್.

ಮೈಸೂರು,ಏಪ್ರಿಲ್,11,2023(www.justkannada.in): ಚಿತ್ರದುರ್ಗದಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬಂಡಾಯವೆದ್ದು ಜೆಡಿಎಸ್ ಸೇರ್ಪಡೆಗೆ ಮುಂದಾಗಿರುವ ಮಾಜಿ ಎಂಎಲ್ ಸಿ ರಘು ಆಚಾರ್ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದಾರೆ.

ಹುಣಸೂರಿನಲ್ಲಿ ದೇವರಾಜ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ರಘು ಆಚಾರ್ ಬಳಿಕ ಕಾಂಗ್ರೆಸ್ ಸೋಲಿಸುವುದಾಗಿ ಶಪಥ ಮಾಡಿದರು. ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ‌ ಗೆದ್ದು ತೋರಿಸ್ತಿನಿ ಎಂದು ಸಿದ್ದರಾಮಯ್ಯ ವಿರುದ್ಧ ರಘು ಆಚಾರ್ ಬಹಿರಂಗ ಸವಾಲು ಹಾಕಿದರು.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ‌ ಅವಕಾಶ ಮಾಡಿಕೊಟ್ಟರೆ ಸ್ಪರ್ಧೆ ಖಚಿತ. ಕಾಂಗ್ರೆಸ್ ಸೋಲಿಸಲು ನಾನು ಶತಾಯ ಗತಾಯ ಪಣ ತೊಟ್ಟಿರುವೆ. ಈ ಬಾರಿ ಸ್ಪರ್ಧಿಸಿ‌ ಗೆದ್ದೇ ಗೆಲ್ಲುತ್ತೇನೆ ನಾನು ಗೆಲ್ಲುತ್ತೇನೋ, ಸೋಲುತ್ತೇನೋ ನಿಮಗೆ ಮುಂದೆ ತಿಳಿಯಲಿದೆ. ಮೇ 13ರ ಚುನಾವಣೆ ಬಳಿಕ ನಿಮಗೆ ಗೊತ್ತಾಗುತ್ತದೆ ಎಂದು ರಘು ಆಚಾರ್ ಹೇಳಿದ್ದಾರೆ.

Key words: contest – Varuna -Raghu Achar – against -former CM -Siddaramaiah.