ಹೋಟೆಲ್ ಗ್ರಾಹಕರಿಗೆ ಸಿಹಿಸುದ್ದಿ: ಸದ್ಯಕ್ಕೆ ಊಟ, ತಿಂಡಿ ದರ ಏರಿಕೆ ಇಲ್ಲ.

ಬೆಂಗಳೂರು,ಏಪ್ರಿಲ್,3,2023(www.justkannada.in): ಸದ್ಯಕ್ಕೆ ಊಟ, ತಿಂಡಿ ದರ ಹೆಚ್ಚಿಸದಿರುವುದಕ್ಕೆ   ಬೆಂಗಳೂರು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದ್ದು ಈ ಮೂಲಕ ಹೋಟೆಲ್ ಗ್ರಾಹಕರಿಗೆ  ಗುಡ್ ನ್ಯೂಸ್ ನೀಡಿದೆ.

ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಭೆ ನಡೆಸಿದ ಹೋಟೆಲ್​ ಮಾಲೀಕರ ಸಂಘ, ಊಟ, ತಿಂಡಿ ದರ ಹೆಚ್ಚಳ ಮಾಡದಿರಲು ತೀರ್ಮಾನಿಸಿದೆ.  ಈ ಕುರಿತು ಮಾತನಾಡಿದ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್,  ಸದ್ಯಕ್ಕೆ ಹೋಟೆಲ್ ಊಟ, ತಿಂಡಿ ದರ ಏರಿಕೆ ಇಲ್ಲ.  ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಚುನಾವಣೆ ಮುಗಿಯುವವರೆಗೆ ಬೆಲೆ ಏರಿಕೆ ಮಾಡದಂತೆ ತೀರ್ಮಾನ ಮಾಡಲಾಗಿದೆ.  ಜತೆಗೆ, ಗ್ಯಾಸ್ ದರ ಇಳಿಕೆ ಮಾಡುವಂತೆ ಕೇಂದ್ರದ ಮೇಲೆ‌ ಒತ್ತಡ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಎಲ್​ಪಿಜಿ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಲವು ಹೋಟೆಲ್ ಮಾಲೀಕರಿಗೆ ಭಾರೀ ಹೊಡೆತ ಬಿದ್ದಿದೆ. ಊಟ, ತಿಂಡಿ, ಕಾಫಿ, ಟೀ ದರ ತುಂಬಾ ಕಡಿಮೆ ಇದ್ದು ಅವರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ತೀರಾ ನಷ್ಟವಾಗುತ್ತಿದ್ದರೆ ಶೇ.10ರ ದರ  ಏರಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಪಿಸಿ ರಾವ್ ತಿಳಿಸಿದ್ದಾರೆ.

Key words: Good news -hotel customers-no increase – price -meals