Friday, August 14, 2026

BDA Apartments

Home Front Page ಏಪ್ರಿಲ್ 8 ಅಥವಾ 9 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ- ಕೇಂದ್ರ ಸಚಿವ ಪ್ರಹ್ಲಾದ್...

ಏಪ್ರಿಲ್ 8 ಅಥವಾ 9 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಬೆಳಗಾವಿ ಏಪ್ರಿಲ್,3,2023(www.justkannada.in): ಏಪ್ರಿಲ್ 8 ಅಥವಾ ಏಪ್ರಿಲ್ 9 ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಎರಡು ದಿನಗಳ ಕಾಲ ಪದಾಧಿಕಾರಿಗಳು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಪಕ್ಷದ ಕೆಲ ಪ್ರಮುಖ ಮುಖಂಡರ ನೇತೃತ್ವದಲ್ಲೂ ಸಭೆ ಮಾಡಿದ್ದೇವೆ. ನಾಳೆ, ನಾಡಿದ್ದು ಸಭೆ ಮಾಡಲಿದ್ದೇವೆ. ಬೆಂಗಳೂರು, ಬೆಳಗಾವಿ ಅತಿಹೆಚ್ಚು ಸ್ಥಾನ ಹೊಂದಿರುವ ಜಿಲ್ಲೆಗಳಾಗಿವೆ. ಮಾಹಿತಿ ಸಂಗ್ರಹಿಸಿ ಸಂಸದೀಯ ಮಂಡಳಿಗೆ ಶಿಫಾರಸ್ಸು ಮಾಡುತ್ತೇವೆ ಎಂದರು.

ಕೋರ್ ಕಮಿಟಿ ಸಭೆಯಲ್ಲಿ ಉಂಟಾದ ಗದ್ದಲ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ,  ಯಾವುದೇ ಗದ್ದಲ, ಗಲಾಟೆ ಆಗಿಲ್ಲ. ಪೈಪೋಟಿ ಜಾಸ್ತಿ ಇದೆ ಅಷ್ಟೆ. ರಮೇಶ್ ಜಾರಕಿಹೊಳಿ ಇಲ್ಲೇ ಇದ್ದಾರೆ ಕೇಳಿ. ಯಾವ ಗಲಾಟೆ ಆಗಿಲ್ಲ. ಬೆಳಗಾವಿ ಜಿಲ್ಲೆ ಕೋರ್ ಕಮಿಟಿ ಸಭೆ ನಡೆದಿದೆ. 18 ಕ್ಷೇತ್ರ ಗೆಲ್ಲುವ ಗುರಿ ಇದೆ ಎಂದು ಹೇಳಿದರು.

Key words: BJP candidates – list -will – announced – April 8 or 9- Union Minister -Prahlad Joshi.