Friday, September 18, 2026

BDA Apartments

ನಾನ್ಯಾಕೆ ಸಿದ‍್ಧರಾಮಯ್ಯ ವಿರುದ್ಧ ಸ್ಪರ್ಧಿಸಲಿ- ಸಚಿವ ವಿ.ಸೋಮಣ್ಣ BDA JK_Adv BDA Adv
Home Front Page ನಾನ್ಯಾಕೆ ಸಿದ‍್ಧರಾಮಯ್ಯ ವಿರುದ್ಧ ಸ್ಪರ್ಧಿಸಲಿ- ಸಚಿವ ವಿ.ಸೋಮಣ್ಣ.

ನಾನ್ಯಾಕೆ ಸಿದ‍್ಧರಾಮಯ್ಯ ವಿರುದ್ಧ ಸ್ಪರ್ಧಿಸಲಿ- ಸಚಿವ ವಿ.ಸೋಮಣ್ಣ.

ಬೆಂಗಳೂರು,ಮಾರ್ಚ್,21,2023(www.justkannada.in):  ವರುಣಾ ಕ್ಷೇತ್ರದಿಂದ ಸಿದ್ಧರಾಮಯ್ಯ ವಿರುದ್ಧ  ಸ್ಪರ್ಧೆ ಮಾಡುತ್ತೀರಾ ಎಂಬ  ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿರುವ ಸಚಿವ ವಿ.ಸೋಮಣ್ಣ, ನಾನು ವರುಣ ಕ್ಷೇತ್ರದಿಂದ ಸ್ಪರ್ಧಿಸಲ್ಲ. ನಾನ್ಯಾಕೆ ಸಿದ‍್ಧರಾಮಯ್ಯ ವಿರುದ್ಧ ಸ್ಪರ್ಧಿಸಲಿ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ವಿ.ಸೋಮಣ್ಣ, ಸಿದ್ದರಾಮಯ್ಯ ರಾಜ್ಯದ ದೊಡ್ಡನಾಯಕ. ಈ ಹಿಂದೆ ಚಾಮುಂಡೇಶ್ವರಿ ಬೈ ಎಲೆಕ್ಷನ್‌ ಲ್ಲಿ ನಾನು ಕೆಲಸ ಮಾಡಿದ್ದೆನು. 42 ಬೂತ್ ಜವಾಬ್ದಾರಿ ತಗೊಂಡಿದ್ದೆ. ಸಿದ್ದರಾಮಯ್ಯಗೆ ಯಾವ ಕ್ಷೇತ್ರದಲ್ಲಿ ಟಿಕೆಟ್‌ ನೀಡೊದು ಬಿಡೋದು, ಅವರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಒಬ್ಬ ರಾಜ್ಯದಲ್ಲಿ ಸರ್ವೋಚ್ಛ ನಾಯಕರು. ಅವರ ವಿರುದ್ದ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.

ನನಗೆ ಗೋವಿಂದರಾಜನಗರ ಕ್ಷೇತ್ರ ಇದೆ. ಚಾಮರಾಜನಗರಕ್ಕೆ ಹೋಗಿ ಕೆಲಸ ಮಾಡಲು ಅಮಿತ್ ಶಾ ಹೇಳಿದ್ದಾರೆ. ನಾನು ಹನೂರಿನಲ್ಲಿ ಸ್ಪರ್ಧಿಸುತ್ತೇನೆ ಎಂದರೂ ಯಾರು ಏನು ಹೇಳಲ್ಲ ಎಂದು ಸಚಿವ ಸೋಮಣ್ಣ ತಿಳಿಸಿದರು.

Key words: contest- against –Siddhiramaiah-  Former minister -V. Somanna.