Monday, August 10, 2026

BDA Apartments

Home Crime  ಕೌಟುಂಬಿಕ ಕಲಹ: ತಂದೆ , ಮಗ ನೇಣಿಗೆ ಶರಣು.

 ಕೌಟುಂಬಿಕ ಕಲಹ: ತಂದೆ , ಮಗ ನೇಣಿಗೆ ಶರಣು.

ಮೈಸೂರು ,ಮಾರ್ಚ್,15,2023(www.justkannada.in):  ಕೌಟುಂಬಿಕ ಕಲಹ ಹಿನ್ನೆಲೆ  ತಂದೆ ನೇಣಿಗೆ ಶರಣಾಗಿದ್ದು ತಂದೆ ಸಾವಿನಿಂದ ಮನನೊಂದ ಮಗನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಹೆಚ್.ಡಿ.ಕೋಟೆ ತಾಲೂಕಿನ ಎನ್.ಬೇಗೂರು ಸಮೀಪದ ಜಕ್ಕಳ್ಳಿ ಕಾಲೋನಿಯಲ್ಲಿ ಘಟನೆ ನಡೆದಿದೆ. ಜಕ್ಕಳ್ಳಿ ಕಾಲೋನಿಯ ನಾಗೇಗೌಡ ಮತ್ತು ಮಧು ಪ್ರತ್ಯೇಕವಾಗಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು.

ಕೌಟುಂಬಿಕ ಕಲಹದಿಂದ ಬೇಸತ್ತ ತಂದೆ ನಾಗೇಗೌಡ(55) ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ಬೇಳೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದರು. ತಂದೆ ಸಾವಿನ ಸುದ್ದಿ ತಿಳಿದು ಮನನೊಂದ ಮಗ ಮಧು (24) ತಡರಾತ್ರಿ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಒಂದೇ ಕುಟುಂಬದ ತಂದೆ ಮಗನ ಎರಡು ಮೃತದೇಹಗಳ ಅಂತ್ಯ ಸಂಸ್ಕಾರವನ್ನ ಗ್ರಾಮದಲ್ಲಿ ಏಕಕಾಲದಲ್ಲಿ ನೆರವೇರಿಸಲಾಯಿತು. ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: mysore-Father- son- hanged.