Sunday, September 27, 2026

BDA Apartments

ಮುಂದೆ ಬಲಿಜ ಜನಾಂಗಕ್ಕೆ 2ಎ ಮೀಸಲಾತಿ ಕೊಡುತ್ತೇವೆ- ಸಚಿವ ಸುಧಾಕರ್ ಭರವಸೆ BDA JK_Adv...
Home Front Page ಮುಂದೆ ಬಲಿಜ ಜನಾಂಗಕ್ಕೆ 2ಎ ಮೀಸಲಾತಿ ಕೊಡುತ್ತೇವೆ- ಸಚಿವ ಸುಧಾಕರ್ ಭರವಸೆ.

ಮುಂದೆ ಬಲಿಜ ಜನಾಂಗಕ್ಕೆ 2ಎ ಮೀಸಲಾತಿ ಕೊಡುತ್ತೇವೆ- ಸಚಿವ ಸುಧಾಕರ್ ಭರವಸೆ.

ಚಿಕ್ಕಬಳ್ಳಾಪುರ,ಮಾರ್ಚ್,7,2023(www.justkannada.in): ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಲಿಜ ಜನಾಂಗಕ್ಕೆ 2ಎ ಮೀಸಲಾತಿ ನೀಡುತ್ತೇವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್  ಭರವಸೆ ನೀಡಿದರು.

ಚಿಕ್ಕಬಳ್ಳಾಪುರದಲ್ಲಿ ನಡೆದ ಯೋಗಿ ನಾರೇಯಣ ಯತೀಂದ್ರರ 297ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಸಚಿವ ಸುಧಾಕರ್,  ಒಂದು ವಾರದಲ್ಲಿ ಬಲಿಜ ಸಮುದಾಯದ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲಾಗುವುದು. ಬಲಿಜ ಸಂಘಕ್ಕೆ 8 ಕೋಟಿ ರೂ. ಮೌಲ್ಯದ 1 ಎಕರೆ ಜಮೀನು ನೀಡುತ್ತೇವೆ. ಈಗ 2ಎ ಮೀಸಲಾತಿಗಾಗಿ ದೊಡ್ಡ ದೊಡ್ಡ ಸಮುದಾಯಗಳು ಹೋರಾಟ ನಡೆಸುತ್ತಿವೆ. ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ಖಂಡಿತವಾಗಿಯೂ ಬಲಿಜ ಸಮುದಾಯದವರಿಗೆ ಉದ್ಯೋಗದಲ್ಲಿ 2ಎ ಮೀಸಲಾತಿ ನೀಡುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬಲಿಜ ಜನಾಂಗ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಮುಂದಿನ ಒಂದು ವಾರದಲ್ಲಿ ಬಲಿಜ ಜನಾಂಗ ಅಭಿವೃದ್ದಿ ಮಂಡಳಿ ಸ್ಥಾಪನೆ ಮಾಡುತ್ತೇನೆ ಎಂದು ಸಚಿವ ಸುಧಾಕರ್ ಹೇಳಿದರು.

Key words: 2A reservation – Balija – Community – Minister -Sudhakar