Friday, August 14, 2026

BDA Apartments

Home Front Page ಮೈಸೂರಿನಲ್ಲಿ  ‘ಕಲಾಕೃತಿ ಪ್ರದರ್ಶನ’ ಕಾರ್ಯಕ್ರಮ ಉದ್ಘಾಟನೆ…

ಮೈಸೂರಿನಲ್ಲಿ  ‘ಕಲಾಕೃತಿ ಪ್ರದರ್ಶನ’ ಕಾರ್ಯಕ್ರಮ ಉದ್ಘಾಟನೆ…

ಮೈಸೂರು,ಆ,23,2019(www.justkannada.in): ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ಮತ್ತು ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್  ವತಿಯಿಂದ ಗಡಿಯಾಚೆಗಿನ ಸಮುದಾಯಗಳು ಮತ್ತು ಏಷ್ಯಾದಲ್ಲಿನ ಸಂಸ್ಕೃತಿಗಳು ವಿಷಯಕ್ಕ ಕುರಿತ ಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮವನ್ನ ಇಂದು ಆಯೋಜಿಸಲಾಗಿತ್ತು.

ನಗರದ ವಿಜಯನಗರ 2ನೇ ಹಂತದಲ್ಲರುವ ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದ್ದ ಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮವನ್ನ ಹಿರಿಯ ವನ್ಯಜೀವಿ  ಛಾಯಾಗ್ರಾಹಕ ಎಸ್. ತಿಪ್ಪೇಸ್ವಾಮಿ ಅವರು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ನ ಪ್ರಿನ್ಸಿಪಾಲ್ ಆದ ಮಹದೇವಶೆಟ್ಟಿ, ಪತ್ರಿಕಾ ಛಾಯಾಗ್ರಾಹಕರಾದ ವಿ.ಜಿ ಶ್ರೀಧರ್, ಛಾಯಾಗ್ರಾಹಕರಾದ ಬಿ.ಜಿ ರೇಣು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Key words: Inauguration – Artwork  special –exhibition-Mysore