ಬೆಳಗಾವಿ,ಫೆಬ್ರವರಿ,10,2023(www.justkannada.in): ಹಾಸನ ಕ್ಷೇತ್ರ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದು, ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅನಿವಾರ್ಯ ಅಲ್ಲ. ಹೊಳೆನರಸೀಪುರ, ಹಾಸನ ಎರಡು ಕ್ಷೇತ್ರಗಳ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.![]()
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಗೆಲ್ಲುವ ಅಭ್ಯರ್ಥಿಯನ್ನ ಹಾಸನಕ್ಕೆ ಹಾಕುತ್ತೇನೆ. ಹಾಸನ ಮತ್ತು ಹೊಳೇನರಸಿಪುರ ಕ್ಷೇತ್ರದ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ಟಿಕೆಟ್ ವಿಚಾರವಾಗಿ ಗೊಂದಲಕ್ಕೆ ಎಡೆ ಮಾಡಿಕೊಡಲ್ಲ ಎಂದರು.
ಉತ್ತರಕನ್ನಡ ಜಿಲ್ಲೆಯಲ್ಲಿ 4 ಅಭ್ಯರ್ಥಿ ಘೋಷಿಸಬೇಕಿದೆ. 2ನೇ ಹಂತದಲ್ಲಿ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ವಿಶ್ರಾಂತಿ ತೆಗೆದುಕೊಳ್ಳದೆ ನಾಡಿನ ಜನರ ನಡುವೆ ಇರಲು ಬಯಸುತ್ತೇನೆ. ಪಂಚರತ್ನಯಾತ್ರೆ ನೋಡಿ ಬಿಜೆಪಿಯವರಿಗೆ ಭಯ ಶುರುವಾಗಿದೆ. ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ 5 ಯೋಜನೆ ಜಾರಿ ಮಾಡುತ್ತೇವೆ. ಪಂಚರತ್ನಯಾತ್ರೆಯ ಯೋಜನೆಗಳನ್ನ ಚಾರಿ ಮಾಡುತ್ತೇವೆ ಎಂದು ಹೆಚ್.ಡಿಕೆ ತಿಳಿಸಿದರು.
Key words: Bhavani Revanna – not indispensable – Hassan- constituency-Former CM -HD Kumaraswamy.







