ಮಂಡ್ಯ,ಫೆಬ್ರವರಿ,9,2023(www.justkannada.in): ಮಂಡ್ಯ ಜಿಲ್ಲೆಯಲ್ಲಿ ಚಿರತೆ ಹಾವಳಿ ಆತಂಕ ಮುಂದುವರೆದಿದ್ದು ಕೆ.ಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದಲ್ಲಿ ತೋಟದ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಅವಿತು ಕುಳಿತ ಘಟನೆ ನಡೆದಿದೆ.![]()
ಮೂಡನಹಳ್ಳಿ ಗ್ರಾಮದ ನಿಂಗೇಗೌಡರ ತೋಟದ ಮನೆಯಲ್ಲಿ ಚಿರತೆ ಸೇರಿಕೊಂಡಿದ್ದು, 10 ಮೇಕೆಗಳಲ್ಲಿ ಎರಡು ಮೇಕೆಗಳನ್ನ ತಿಂದು ಹಾಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿದ ತಕ್ಷಣ ಗ್ರಾಮಸ್ಥರಿಗೆ ಆತಂಕ ಹೆಚ್ಚಾಗಿದ್ದು, ಚಿರತೆಯನ್ನು ಕೂಡಿ ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
Key words: Leopard-sitting – farmhouse-kr pet







