Tuesday, October 6, 2026

BDA Apartments

immense respect BDA JK_Adv BDA Adv
Home Front Page ಜ.29ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆ: ವಸ್ತ್ರ ಸಂಹಿತೆ ನಿಗದಿ

ಜ.29ರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆ: ವಸ್ತ್ರ ಸಂಹಿತೆ ನಿಗದಿ

ಬೆಂಗಳೂರು, ಜನವರಿ 22, 2022 (www.justkannada.in): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಜ.29ರಿಂದ ಫೆ.12ರವರೆಗೆ ನಡೆಸುವ ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ನಿಗದಿ ಮಾಡಲಾಗಿದೆ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕೆಲ ನಿಯಮಗಳ ಪಾಲನೆ ಮಾಡುವುದು ಕಡ್ಡಾಯವಾಗಿದೆ.

ಜನವರಿ 29 ರಿಂದ ಫೆ.12 ರವರೆಗೆ ಕೆಇಎ ನಡೆಸುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಬೀಜ ಅಭಿವೃದ್ಧಿನಿಗಮ ಸೇರಿದಂತೆ ವಿವಿಧ ಇಲಾಖೆ ಹಾಗೂ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ಬಿಡುಗಡೆ ಮಾಡಿದೆ.

ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ ಮಾತ್ರ ಧರಿಸಿರಬೇಕು. ಹೆಚ್ಚು ಜೇಬುಗಳು, ದೊಡ್ಡ ಬಟನ್, ಕಸೂತಿ ಇರಬಾರದು. ಕುರ್ತಾ, ಪೈಜಾಮಕ್ಕೆ ಅವಕಾಶ ಇಲ್ಲ, ಶೂ ಹಾಕುವಂತಿಲ್ಲ.

ಮಹಿಳಾ ಅಭ್ಯರ್ಥಿಗಳು ಹೈ ಹೀಲ್ಡ್ ಚಪ್ಪಲಿ ಹಾಕುವಂತಿಲ್ಲ. ಕಿವಿಯೋಲೆ, ಉಂಗುರಗಳು, ನೆಕ್ಸಸ್‌ಗಳನ್ನು ಹಾಕಬಾರದು. ಉಳಿದಂತೆ ಡಿಜಿ ಟಲ್ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ, ಪ್ರವೇಶ ಪತ್ರ ಇಲ್ಲದೆ ಯಾವುದೇ ಅಭ್ಯರ್ಥಿ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ.