Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Crime ತಾಯಿ ಮಾಡಿದ ಸಾಲಕ್ಕೆ 14 ವರ್ಷದ ಮಗನ ಮೇಲೆ ಹಲ್ಲೆ.

ತಾಯಿ ಮಾಡಿದ ಸಾಲಕ್ಕೆ 14 ವರ್ಷದ ಮಗನ ಮೇಲೆ ಹಲ್ಲೆ.

ಕೊಪ್ಪ,ಳ,ಜನವರಿ,7,2023(www.justkannada.in):  ಪೋಷಕರು ಮಾಡಿದ ಸಾಲಕ್ಕೆ ಮಗನ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ  ಕೆ.ಹೊಸೂರಿನಲ್ಲಿ ಡಿಸೆಂಬರ್ 28 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕರಾಯಪ್ಪ ರಾಜೇಶ್ವರಿ ಸೇರಿ 6 ಜನರು ಹಲ್ಲೆ ನಡೆಸಿದ್ದಾರೆ. 14 ವರ್ಷದ ಬಾಲಕನ ತಾಯಿ ಮಂಜುಳ ಎಂಬುವವರು 40 ಸಾವಿರ ರೂ. ಸಾಲ ಪಡೆದಿದ್ದರು. ಮಂಜುಳ 30 ಸಾವಿರ ರೂ. ವಾಪಸ್ ನೀಡಿದ್ದರು. ಇನ್ನು 10 ಸಾವಿರ ಬಾಕಿ ಇತ್ತು.ತಾಯಿ ಮಾಡಿದ ಸಾಲಕ್ಕೆ 14 ವರ್ಷದ ಮಗನ ಮೇಲೆ ಹಲ್ಲೆ assult

ಈ ನಡುವೆ ಅಸಲು ಬಡ್ಡಿ ಸೇರಿ 14 ಸಾವಿರಕ್ಕೆ ಬೇಡಿಕೆ  ಇಟ್ಟಿ ಇದೀಗ ಮಂಜುಳ ಪುತ್ರ 14 ವರ್ಷದ ಬಾಲಕನನ್ನ ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ಈ ಕುರಿತು ಕೊಪ್ಪಳ ಎಸ್ ಪಿಗೆ ದೂರು ಸಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: 14-year-old son- assaulted – debt –mother-koppal