Friday, September 18, 2026

BDA Apartments

Home Front Page ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಅನಗತ್ಯವಾಗಿ ಓಡಾಡಿದ್ರೆ ಕ್ರಮ- ಮೈಸೂರು ಪೊಲೀಸ್...

ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಅನಗತ್ಯವಾಗಿ ಓಡಾಡಿದ್ರೆ ಕ್ರಮ- ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್.

ಮೈಸೂರು,ಡಿಸೆಂಬರ್,31,2022(www.justkannada.in):  ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು ಈ ನಡುವೆ ಹೊಸ ವರ್ಷ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ.

ಮೈಸೂರಿನಲ್ಲಿ ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ನೀಡಲಾಗಿದ್ದು ನಂತರ ಅನವಶ್ಯವಾಗಿ ಓಡಾಡಿದರೇ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ರಮೇಶ್ ಬಾನೋತ್, ರಾತ್ರಿ 12.30ರೊಳಗೆ  ಎಲ್ಲಾ ಪಾರ್ಟಿಗಳು ಮುಗಿಯಬೇಕು ಮಧ್ಯರಾತ್ರಿ ಒಂದು ಗಂಟೆ  ನಂತರ ಅನವಶ್ಯಕವಾಗಿ ಓಡಾಡಿದರೇ ಕ್ರಮ ಕೈಗೊಳ್ಳಲಾಗುತ್ತದೆ. 1 ಗಂಟೆ ನಂತರ ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್  ತಪಾಸಣೆ ಮಾಡಲಾಗುತ್ತದೆ.  ಅನುಮತಿ ಪಡೆದ ಹೋಟೆಲ್ ಗಳಿಗೆ 1ರವರೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ramesh

ಹಾಗೆಯೇ  ಸೆಲೆಬ್ರೇಷನ್ ನೆಪದಲ್ಲಿ ಗಲಾಟೆ ಮಾಡಿದರೇ ಕ್ರಮ ಕೈಗೊಳ್ಳುತ್ತೇವೆ. ಚಾಮುಂಡಿಬೆಟ್ಟಕ್ಕೂ ಇಂದು ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ  ರಮೇಶ್ ಬಾನೋತ್  ಹೇಳಿದರು.

Key words: New Year- celebration – till 1 am-Mysore -Police –Commissioner- Ramesh Banoth.