Sunday, August 2, 2026

BDA Apartments

Home Front Page ಕಳಸಾ ಬಂಡೂರಿ ಯೋಜನೆಗೆ ಒಪ್ಪಿಗೆ: ಎಲ್ಲರೂ ನಡೆಸಿದ ಸಮಷ್ಠಿ ಹೋರಾಟಕ್ಕೆ ಸಂದ ಜಯ- ಮಾಜಿ ಸಿಎಂ...

ಕಳಸಾ ಬಂಡೂರಿ ಯೋಜನೆಗೆ ಒಪ್ಪಿಗೆ: ಎಲ್ಲರೂ ನಡೆಸಿದ ಸಮಷ್ಠಿ ಹೋರಾಟಕ್ಕೆ ಸಂದ ಜಯ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು, ಡಿಸೆಂಬರ್,29, 2022(www.justkannada.in): ಕಳಸಾ ಬಂಡೂರಿ ಯೋಜನೆಗೆ ಕೇಂದ್ರ  ಸರ್ಕಾರ ಒಪ್ಪಿಗೆ ನೀಡಿರುವುದನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ. ಇದು ಸಮಸ್ತ ಕನ್ನಡಿಗರ ಹೋರಾಟಕ್ಕೆ ದೊರೆತ ಫಲ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ. ರಾಜಕೀಯಕ್ಕೆ ಅತೀತವಾಗಿ ರೈತರು, ಕನ್ನಡಪರ ಹೋರಾಟಗಾರರು, ಕಾರ್ಮಿಕರು ಸೇರಿ ಎಲ್ಲರೂ ನಡೆಸಿದ ಸಮಷ್ಠಿ ಹೋರಾಟಕ್ಕೆ ಸಂದ ಜಯವಿದು ಎಂದಿದ್ದಾರೆ.

ನಮ್ಮ ಜೆಡಿಎಸ್ ಪಕ್ಷ ಪಕ್ಷ ಕನ್ನಡಿಗರ ಜತೆಗೂಡಿ ಹೋರಾಟ ನಡೆಸಿದೆ. ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ ದೇವೇಗೌಡರು ಅವರು ಸಂಸತ್ತಿನ ಒಳಗೆ, ಹೊರಗೆ ದೊಡ್ಡ ಸಂಘರ್ಷವನ್ನೇ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಮಾನ್ಯ ಪ್ರದಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದರು.

ಕಳಸಾ ಬಂಡೂರಿ ಯೋಜನೆಗೆ ಸದ್ಯಕ್ಕೆ ಜಲ ಆಯೋಗ ಒಪ್ಪಿಗೆ ನೀಡಿದೆ. ಆದರೆ, ಸರ್ವೋಚ್ಚ ನ್ಯಾಯಾಲಯದಲ್ಲಿ ವ್ಯಾಜ್ಯ ಬಾಕಿ ಇದೆ. ಪರಿಸರ ಇಲಾಖೆಯ ಅನುಮತಿ ಇನ್ನೂ ಸಿಕ್ಕಿಲ್ಲ. ಇದೆಲ್ಲವನ್ನೂ ತ್ವರಿತವಾಗಿ ಮುಗಿಸಿಕೊಂಡು ಕಾಮಗಾರಿ ಆರಂಭ ಮಾಡಬೇಕಿದೆ. ರಾಜ್ಯ ಸರಕಾರ ಇನ್ನು ತಡ ಮಾಡುವುದು ಬೇಡ ಎಂದು ಹೆಚ್.ಡಿಕೆ ಸಲಹೆ ನೀಡಿದ್ದಾರೆ.

Key words: Acceptance – Kalasa Banduri –project- Former CM-HD Kumaraswamy.