Monday, August 10, 2026

BDA Apartments

Home Front Page ನನಗೆ ಯಾವುದೇ ಅಸಮಾಧಾನವಿಲ್ಲ: ಟಿಕೆಟ್ ಕೊಡುವುದು ಹೈಕಮಾಂಡ್ ಗೆ ಬಿಟ್ಟಿದ್ದು- ಶಾಸಕ ಮಹೇಶ್ ಕುಮಟಳ್ಳಿ.

ನನಗೆ ಯಾವುದೇ ಅಸಮಾಧಾನವಿಲ್ಲ: ಟಿಕೆಟ್ ಕೊಡುವುದು ಹೈಕಮಾಂಡ್ ಗೆ ಬಿಟ್ಟಿದ್ದು- ಶಾಸಕ ಮಹೇಶ್ ಕುಮಟಳ್ಳಿ.

ಬೆಳಗಾವಿ,ಡಿಸೆಂಬರ್,29,2022(www.justkannada.in):  ಬಿಜೆಪಿ ಪಕ್ಷದಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ಟಿಕೆಟ್ ಕೊಡುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಅಥಣಿ ಕ್ಷೇತ್ರದ  ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ, ಸಚಿವ ಸಂಪುಟ ಸೇರ್ಪಡೆ ವಿಚಾರ, ವರಿಷ್ಠರು ಭರವಸೆ ಈಡೇರುಸುತ್ತಾರೆ. ನಾನು ಸಹ ಅಥಣಿ ಕ್ಷೇತ್ರದಲ್ಲಿ ಪಕ್ಷದ ಪರ ಕೆಲಸ ಮಾಡುತ್ತಿದ್ದೇನೆ ಎಂದರು.

ಅಥಣಿಯಲ್ಲಿ ಟಿಕೆಟ್ ಗೆ ಲಕ್ಷ್ಮಣ್  ಸವದಿ ಮತ್ತು ತಮ್ಮ ನಡುವೆ ಪೈಪೋಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಹೇಶ್ ಕುಮಟಳ್ಳಿ,  ಸವದಿ ಮತ್ತು ನಾನು ಇಬ್ಬರು ಪಕ್ಷದ ಕೆಲಸ ಮಾಡುತ್ತಿದ್ದೇವೆ. ಟಿಕೆಟ್ ಕೊಡುವುದು ಬಿಡುವುದು ಪಕ್ಷದ  ವರಿಷ್ಠರಿಗೆ ಬಿಟ್ಟಿದ್ದು. ನಮ್ಮ ಹೈಕಮಾಂಡ್ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ನಮಗೆ ಯಾವುದೇ ಅಸಮಾಧಾನಿವಿಲ್ಲ ಎಂದರು.

Key words:  High Command –ticket-decision-MLA- Mahesh Kumatalli.