Saturday, September 19, 2026

BDA Apartments

Home Front Page ಕಾಂಗ್ರೆಸ್ ನವರನ್ನ ಹಣಿಯಲು ತನಿಖಾ ಸಂಸ್ಥೆಗಳ ದುರ್ಬಳಕೆ: ಯಾವುದಕ್ಕೂ ಹೆದರಲ್ಲ- ಡಿ.ಕೆ ಶಿವಕುಮಾರ್.

ಕಾಂಗ್ರೆಸ್ ನವರನ್ನ ಹಣಿಯಲು ತನಿಖಾ ಸಂಸ್ಥೆಗಳ ದುರ್ಬಳಕೆ: ಯಾವುದಕ್ಕೂ ಹೆದರಲ್ಲ- ಡಿ.ಕೆ ಶಿವಕುಮಾರ್.

ಬೆಂಗಳೂರು,ಡಿಸೆಂಬರ್,19,2022(www.justkannada.in): ಕಾಂಗ್ರೆಸ್ ನವರನ್ನ ಹಣಿಯಲು ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಐಟಿ ಇಡಿ ಸಿಬಿಐ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.

ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ಈ ಹಿಂದೆ ಮೊಬೈಲ್  ಗಿಫ್ಟ್ ನೀಡಿದ್ದಕ್ಕೆ ನೋಟೀಸ್ ನೀಡಿದ್ದರು. ನನ್ನ ಸಂಬಂಧಿಕರು ವ್ಯವಹಾರದ ಪಾಲುದಾರರಿಗೂ ನೋಟೀಸ್ ನೀಡಿ ಸಿಬಿಐ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ವಕೀಲರಿಗೆ 5 ಲಕ್ಷ ರೂ. ಫೀಸ್ ನೀಡಿದ್ದಕ್ಕೂ ನೋಟಿಸ್ ನೀಡಿದ್ದರು. ನಮ್ಮ ಜಮೀನು ವ್ಯವಹಾರದ ಸಂಬಂಧ ತನಿಖೆ ಮಾಡಿದ್ದಾರೆ. ಇಂದು ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದರು. ಕಾಂಗ್ರೆಸ್ ನವರನ್ನ ಹಣಿಯಲು ತನಿಖಾ ಸಂಸ್ಥೆಗಳ ದುರ್ಬಳಕೆ dks

ನಮ್ಮ ಕುಟುಂಬಕ್ಕೆ ತನಿಖಾ ಸಂಸ್ಥೆಗಳಿಂದ ಕಿರುಕುಳ ನೀಡಲಾಗುತ್ತಿದೆ .  ವಿರೊಧಿಗಳನ್ನ ಮಟ್ಟಹಾಕಲು ತನಿಖಾ  ಸಂಸ್ಥೆಗಳನ್ನ ದುರ್ಬಳಕೆ   ಮಾಡಿಕೊಂಡಿದ್ದಾರೆ.   ನ್ಯಾಯಾಲಯ, ದೇವರ ಮೇಲೆ ಭಾರ ಹಾಕಿ ಮುನ್ನೆಡೆಯುತ್ತೇವೆ . ನಾನು ಯಾವುದೇ ತಪ್ಪು ಮಾಡದಿರುವುದರಿಂದ ಧೈರ್ಯವಾಗಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಹಾಗಾಗಿ ಭಯ ಪಡುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: Misuse – investigative- agencies – blame- Congress-DK Shivakumar