Thursday, September 24, 2026

BDA Apartments

Home Front Page ಶಾಸಕ ಅಶ್ವಿನ್ ಕುಮಾರ್ ಕಾರ್ಯವೈಕರಿಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ತೀವ್ರ ಅಸಮಾಧಾನ.

ಶಾಸಕ ಅಶ್ವಿನ್ ಕುಮಾರ್ ಕಾರ್ಯವೈಕರಿಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ತೀವ್ರ ಅಸಮಾಧಾನ.

ಮೈಸೂರು,ಡಿಸೆಂಬರ್,2,2022(www.justkannada.in): ತಿ.ನರಸೀಪುರದಲ್ಲಿ ಚಿರತೆ ದಾಳಿಗೆ ಯುವತಿ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ  ಶಾಸಕ ಅಶ್ವಿನ್ ಕುಮಾರ್ ಕಾರ್ಯವೈಕರಿಗೆ  ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ.

ಈ ಸಂಬಂಧ ಮಾತನಾಡಿದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಶಾಸಕರಾದವರು ಆಡಳಿತದ ಮೇಲೆ ಹಿಡಿತ ಇಟ್ಟುಕೊಂಡು ಕೆಲಸ ಮಾಡಬೇಕು. ಕೆಲಸ ಆಗಬೇಕು ಎಂದು ಜನರ ಜೊತೆ ಪ್ರತಿಭಟನೆಗೆ ಕೂರುವುದಲ್ಲ. ಇಂತಹ ಶಾಸಕರಿಂದ ಯಾವ ರೀತಿ ಅಭಿವೃದ್ಧಿ ಕಾಣಲು ಸಾಧ್ಯ? ಜನರಿಗೆ ನ್ಯಾಯ ಕೊಡಿಸಬೇಕಾದ ಶಾಸಕರೇ ಪ್ರತಿಭಟನೆಗೆ ಕುಳಿತರೆ  ನ್ಯಾಯ ಕೇಳುವುದು ಯಾರಿಂದ.? ಎಂದು ವಾಗ್ದಾಳಿ ನಡೆಸಿದರು.ಶಾಸಕ ಅಶ್ವಿನ್ ಕುಮಾರ್ ಕಾರ್ಯವೈಕರಿಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ತೀವ್ರ...

ನಾನಿದ್ದಾಗ ಅಧಿಕಾರಿಗಳಿಗೆ ಬೆದರಿಸಿ ಕೆಲಸ ನಿರ್ವಹಿಸುತ್ತಿದ್ದೆ. ನಾನಿಲ್ಲದೆ ಈಗ ಯಾವ ಅಧಿಕಾರಿಗಳು ಭಯಪಡುತ್ತಿಲ್ಲ ಎಂದು ಶಾಸಕ ಅಶ್ವಿನ್ ಕುಮಾರ್ ಕಾರ್ಯವೈಖರಿ ಬಗ್ಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Key words: Former Minister -HC Mahadevappa – MLA- Ashwin Kumar