Friday, September 18, 2026

BDA Apartments

Home Front Page ವಿವಾದಿತ ಬಸ್ ನಿಲ್ದಾಣ: ಗೆದ್ದು ಬೀಗಿದ ಪ್ರತಾಪ್ ಸಿಂಹ, ನೋವಾಗಿದೆ ಎಂದ ರಾಮದಾಸ್ !

ವಿವಾದಿತ ಬಸ್ ನಿಲ್ದಾಣ: ಗೆದ್ದು ಬೀಗಿದ ಪ್ರತಾಪ್ ಸಿಂಹ, ನೋವಾಗಿದೆ ಎಂದ ರಾಮದಾಸ್ !

ಮೈಸೂರು, ನವೆಂಬರ್ 27, 2022 (www.justkannada.in): ವಿವಾದಿತ ಗುಂಬಾಜ್ ಮಾದರಿಯ ಬಸ್ ನಿಲ್ದಾಣ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಸಂಸದ ಪ್ರತಾಪ್ ಸಿಂಹ ಮೇಲುಗೈ ಸಾಧಿಸಿದ್ದಾರೆ.

ಅಕ್ಕಪಕ್ಕ ಎರಡು ಚಿಕ್ಕ ಗೋಪುರ ಮಧ್ಯೆ ಒಂದು ದೊಡ್ಡ ಗೋಪುರ ಇದ್ದರೆ ಅದು ಮುಸ್ಲಿಂ ಮಾದರಿ ಕಟ್ಟಡ. ಅದನ್ನ ತೆರವು ಮಾಡೇ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು.

ಇದೀಗ ಅದನ್ನುತೆರವು ಮಾಡಲಾಗಿದೆ. ಈ ಕುರಿತು್ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ, ಕೊಟ್ಟ ಮಾತಿನಂತೆ ನಾನು ನಡೆದುಕೊಂಡಿದ್ದೇನೆ. ಅದನ್ನ ತೆರವು ಮಾಡುತ್ತೇನೆ ಎಂದಿದ್ದೆ, ಅದರಂತೆ ಈಗ ತೆರವುವಾಗಿದೆ. ಕಾಲಾವಕಾಶ ಕೇಳಿ ಮಾತಿನಂತೆ ಜಿಲ್ಲಾಧಿಕಾರಿ ನಡೆದುಕೊಂಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜೀ ಗೂ ಧನ್ಯವಾದಗಳು ಎಂದು ಫೇಸ್ ಬುಕ್ ಮುಖಪುಟದಲ್ಲಿ ಸಂಸದ ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ.ವಿವಾದಿತ ಬಸ್ ನಿಲ್ದಾಣ bus stand

ಇನ್ನೊಂದು ಕಡೆ  ಅನವಶ್ಯಕವಾಗಿ ಧರ್ಮ ಲೇಪನ ಮಾಡಿದ್ದು ನನಗೆ ನೋವಾಗಿದೆ ಎಂದು ಶಾಸಕ ರಾಮದಾಸ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ. ಇದು ವಿವಾದಿತ ಬಸ್ ನಿಲ್ದಾಣ ವಿಚಾರದಲ್ಲಿ ಶಾಸಕ ರಾಮದಾಸ್ ಗೆ ಹಿನ್ನಡೆ ತಂದಿದೆ ಎನ್ನಲಾಗಿದೆ.

ಆಡಿದ ಮಾತಿನಂತೆ ನಡೆದುಕೊಂಡಿದ್ದೀನಿ ಎಂದು ಸಂಸದ ಪ್ರತಾಪ್ ಸಿಂಹ ಬೀಗುತ್ತಿರುವುದು ಮುಂದೆ ಸಂಸದ – ಶಾಸಕರ ನಡುವೆ ಶೀತಲ ಸಮರಕ್ಕೆ ನಾಂದಿ ಹಾಡಲಿದೆಯೇ ಎಂಬ ಪ್ರಶ್ನೆಗೆ ಕಾರಣವಾಗಿದೆ.