30ಕ್ಕಿಂತಲೂ ಹೆಚ್ಚು ಹಾಸಿಗೆಗಳಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಶೇ.80ರಷ್ಟು ಬೆಡ್ ಗಳು ಕೋವಿಡ್ ಸೋಂಕಿತರಿಗೆ ಮೀಸಲು- ಸಚಿವ ಸುಧಾಕರ್…

ಬೆಂಗಳೂರು,ಏಪ್ರಿಲ್,22,2021(www.justkannada.in): 30 ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಹಾಸಿಗೆಗಳಿರುವಂತಹ ಎಲ್ಲಾ ಆಸ್ಪತ್ರೆಗಳು ಈಗ 80%ರಷ್ಟು ಹಾಸಿಗೆಗಳನ್ನು ಹಾಗೂ ಐಸಿಯು ಸೌಲಭ್ಯವನ್ನು ಕೊರೋನಾ ಸೋಂಕಿತರಿಗೆ ಮೀಸಲಿಡಬೇಕು ಎಂದು  ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ರಾಜ್ಯದಲ್ಲಿರುವ 30ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಎಲ್ಲಾ ಆಸ್ಪತ್ರೆಗಳಲ್ಲಿ ಶೇ.80ರಷ್ಟು ಕೊರೊನಾ ಸೋಂಕಿತರಿಗೆ ಮೀಸಲಿಡಬೇಕು. ಕೇವಲ ಹಾಸಿಗೆಗಳು ಮಾತ್ರವಲ್ಲದೆ ಐಸಿಯುಗಳನ್ನು ಕೂಡ ಮೀಸಲಿಡಬೇಕು. ಡಯಾಲಿಸಿಸ್ ರೋಗಿಗಳು, ಮದರ್ ಕೇರ್ ಕೇಂದ್ರಗಳು, ಜೀವಕ್ಕೆ ಕುತ್ತು ತರುವ ಕಾಯಿಲೆಗಳಿಂದ ನರಳುತ್ತಿರುವ ಹಾಸಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ 30ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಆಸ್ಪತ್ರೆಗಳಲ್ಲಿ ಶೇ.80ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗಾಗಿಯೇ ಮೀಸಲಿಡಬೇಕು ಎಂದು ಹೇಳಿದ್ದಾರೆ. 80 percent - beds -more than -30 beds –hospital- covid-infected people – Minister- Sudhakar.

ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು ಇಂದು ಬೆಳಿಗ್ಗೆ ರಾಜ್ಯ ಹಾಗೂ ವಿಶೇಷವಾಗಿ ಬೆಂಗಳೂರು ನಗರದಲ್ಲಿನ ಕೊರೊನಾ ಪರಿಸ್ಥಿತಿ ಮತ್ತು ಜನರಲ್ಲಿ ಉಂಟಾಗುತ್ತಿರುವ ಭಯ ಹಾಗೂ ಗೊಂದಲಗಳಿಗೆ ಸಂಬAಧಪಟ್ಟಂತೆ ಕೆಲವು ಮುಖ್ಯವಾದ ಸ್ಪಷ್ಟನೆಗಳನ್ನು ನೀಡಿದರು. ಅವುಗಳನ್ನು ಸಂಕ್ಷಿಪ್ತವಾಗಿ ಈ ಕೆಳಗೆ ವಿವರಿಸಲಾಗಿವೆ:

  • ಆಸ್ಪತ್ರೆಗಳಲ್ಲಿ ಡಯಾಲಿಸಿಸ್, ತಾಯಿ ಹಾಗೂ ಶಿಶು ಆರೈಕೆ ಮತ್ತು ಇತರೆ ಎಲ್ಲಾ ರೀತಿಯ ಜೀವಕ್ಕೆ ಬೆದರಿಕೆಯಿರುವಂತಹ ಖಾಯಿಲೆಗಳಿಗಾಗಿ ಮೀಸಲಿರುವ ಹಾಸಿಗೆಗಳಿಗೆ ಯಾವುದೇ ತೊಂದರೆಯಿರುವುದಿಲ್ಲ. ಆದರೆ, ಇವುಗಳನ್ನು ಹೊರತುಪಡಿಸಿದಂತೆ ಬೆಂಗಳೂರು ನಗರದಲ್ಲಿನ ಆಸ್ಪತ್ರೆಗಳಲ್ಲಿರುವ ಇತರೆ ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಮೀಸಲಿರಿಸಲಾಗಿವೆ. ಅಂದರೆ, ಬೆಂಗಳೂರು ನಗರದಲ್ಲಿ 7ಸಾವಿರ ಹೆಚ್ಚಿನ ಸಂಖ್ಯೆಯ ಹಾಸಿಗೆಗಳು ಚಿಕಿತ್ಸೆಗಾಗಿ ತತ್‌ಕ್ಷಣದಲ್ಲಿಯೇ ಲಭ್ಯವಿವೆ.
  • 30 ಹಾಗೂ ಅದಕ್ಕಿಂತಲೂ ಕಡಿಮೆ ಸಂಖ್ಯೆಯ ಹಾಸಿಗೆಗಳಿರುವ ಎಲ್ಲಾ ನರ್ಸಿಂಗ್ ಹೋಂಗಳು ಹಾಗೂ ಆಸ್ಪತ್ರೆಗಳು ಕೋವಿಡ್ ಅಲ್ಲದೆ ಇತರೆ ಖಾಯಿಲೆಗಳಿಗೆ ಚಿಕಿತ್ಸೆಗಾಗಿ ಬರುವಂತಹ ರೋಗಿಗಳಿಗೆ ಚಿಕಿತ್ಸೆಯನ್ನು ಕಡ್ಡಾಯವಾಗಿ ಒದಗಿಸಬೇಕು.
  • 30ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಹಾಸಿಗೆಗಳಿರುವಂತಹ ಎಲ್ಲಾ ಆಸ್ಪತ್ರೆಗಳು ಈಗ 80%ನಷ್ಟು ಹಾಸಿಗೆಗಳನ್ನು ಹಾಗೂ ಐಸಿಯು ಸೌಲಭ್ಯವನ್ನು ರಾಜ್ಯ ಸರ್ಕಾರದ ಸೇವೆಗೆ ಮೀಸಲಿರಿಸಬೇಕು. ಈವರೆಗೂ ಇದರ ಪ್ರಮಾಣ ಕೇವಲ 50%ರಷ್ಟಿತ್ತು.
  • ಬೆಂಗಳೂರು ನಗರದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾಗಿದ್ದು, ಖಾಸಗಿ ಆಸ್ಪತ್ರೆಗಳು ಇದಕ್ಕಾಗಿ ಸಮರ್ಪಣಾ ಮನೋಭಾವದೊಂದಿಗೆ ಸರ್ಕಾರದೊಂದಿಗೆ ಸಹಕರಿಸಿ ಕಾರ್ಯನಿರ್ವಹಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದ ಸೇವೆಗೆಂದು ಮೀಸಲಿರಿಸುವ 80% ಹಾಸಿಗೆಗಳ ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸುತ್ತದೆ ಹಾಗೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ಸರ್ಕಾರದಿಂದ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

 

ENGLISH SUMMARY

Karnataka medical education and health Minister Dr Sudhakar makes important announcements.
Says beds that are dedicated to dialysis, mother and child care and all life threatening diseases will not be not disturbed, but that apart all other beds in Bangalore will be dedicated to Covid patients which means that over 7000 beds will be immediately available for treatment.

All the nursing homes and hospitals with up to and less than 30 beds should mandatorily treat non-Covid patients

All hospitals that have bed capacity of more than 30 will now have to dedicate 80% of the beds and ICU facility to the state government so far it was only 50% now it will be made 80%.

There is a medical emergency and private hospitals need to recognise this and work with the government and handover 80% of the beds to the state government the state government will bear the cost of treatment and refund the money to these hospitals which treat Covid patients.

Key words:  80 percent – beds -more than -30 beds –hospital- covid-infected people – Minister- Sudhakar.