ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದು 8 ವರ್ಷ

ನವದೆಹಲಿ,ಡಿಸೆಂಬರ್,16,2020(www.justkannada.in) : ದೇಶವನ್ನೇ ತಲೆತಗ್ಗಿಸುವಂತೆ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದು 8 ವರ್ಷ ಕಳೆದಿದೆ.

siddaramaiah-forgot-community-becoming-cm-mysore-naleen-kumar-kateel

2012ರಲ್ಲಿ ದೆಹಲಿಯಲ್ಲಿ ಅರೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಮೇಲೆ ಕಾಮುಕರು ಪೈಶಾಚಿಕ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಪ್ರಕರಣದ ಅಪರಾಧಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿ 9 ತಿಂಗಳು ಕಳೆದಿದೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ನಿರ್ಭಯಾಳಿಗೆ ನ್ಯಾಯ ಒದಗಿಸಿಕೊಡಲು ಆಕೆಯ ಹೆತ್ತಮ್ಮ ಆಶಾದೇವಿ ನಿರಂತರ ಹೋರಾಟ ನಡೆಸಿದ್ದರು. ಇನ್ನು ಮುಂದೆಯೂ, ಅತ್ಯಾಚಾರ ಸಂತ್ರಸ್ತರು ಯಾರೇ ಆಗಿರಲಿ ನ್ಯಾಯ ಒದಗಿಸಲು ಅವರ ಪರ ಹೋರಾಟ ನಡೆಸುತ್ತೇನೆ. ಪಾಪಿಗಳನ್ನು ಗಲ್ಲಿಗೆ ಹಾಕುವ ಮೂಲಕ ನನ್ನ ಮಗಳಿಗೆ ನ್ಯಾಯ ಲಭಿಸಿದೆ.

8 years-since-Nirbhaya-rape-case

ಹಾಗಂತ ನಾನು ಸುಮ್ಮನೆ ಕುಳಿತುಕೊಳ್ಳಲಾರೆ. ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ನಾನು ಹೋರಾಟ ನಡೆಸುವೆ. ಅತ್ಯಾಚಾರದ ವಿರುದ್ಧ ನಾವೆಲ್ಲರೂ ಜತೆಯಾಗಿ ದನಿಯೆತ್ತಬೇಕಿದೆ ಎಂದು ಹೇಳಿದ್ದಾರೆ.

key words : 8 years-since-Nirbhaya-rape-case