ಮೈಸೂರಿನ ಆಕ್ಮಿ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

ಮೈಸೂರು,ಆಗಸ್ಟ್,16,2025 (www.justkannada.in):  ಮೈಸೂರಿನ ಆಕ್ಮಿ ಶಾಲೆಯಲ್ಲಿ ಗೌರವ ಮತ್ತು ದೇಶಭಕ್ತಿಯ ಉತ್ಸಾಹದಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಯಾಪ್ಟನ್ ಡಾ.ವಿನಯ್‌ ವಿಟ್ಟಲ್ ಅವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಕ್ಕೆ ಸೇವೆಯ ನಿಜವಾದ ಮನೋಭಾವದ ಕುರಿತು ಸ್ಪೂರ್ತಿ ಮಾತುಗಳನ್ನಾಡಿದರು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ  ಬಗ್ಗೆಯನ್ನ ವಿವರಿಸಿದ ಡಾ.ವಿನಯ್‌ ವಿಟ್ಟಲ್  ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಗೌರವ ಸಲ್ಲಿಸುವುದರ ಜೊತೆಗೆ  ಬಲವಾದ, ಯುನೈಟೆಡ್ ಮತ್ತು ಪ್ರಗತಿಪರ ಭಾರತವನ್ನು ನಿರ್ಮಿಸುವತ್ತ ಹೆಜ್ಜೆ ಇಡಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ದೇಶಭಕ್ತಿಯ ಹಾಡುಗಳು, ಸಾಂಸ್ಕೃತಿಕ ಪ್ರದರ್ಶನಗಳು ಜರುಗಿದವು. ಈ ವೇಳೆ ರೋಟರಿ ಮೈಸೂರು ಆಗ್ನೆಯ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ RTN. PINTO, RTN.  ಮುರುಳೀಧರ್ ಆರ್ ಟಿಎನ್ ಸುರೇಶ್,  ವಸುದೇವನ್, ಹಾಗೂ ಕಮಲಾ ರಂಜಿತ್  ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಆರ್. ಅರುಣ್ ಸಿಂಗ್, ಖಜಾಂಚಿ ಆರ್. ಸುಭಾಶಿನಿ ಮತ್ತು ಕಮಲಾ ರಂಜಿತ್ ಎಜುಕೇಷನಲ್ ಸೊಸೈಟಿಯ ಸದಸ್ಯರು ಉಪಸ್ಥಿತರಿದ್ದರು.

Key words: 79th Independence Day, celebrations, Acme School, Mysore