ರಾಜ್ಯದಲ್ಲಿ ಇಂದು 75 ಮಂದಿಗೆ ಕೊರೋನಾ ಸೋಂಕು ಪತ್ತೆ….

ಬೆಂಗಳೂರು, ಮೇ,28,2020(www.justkannada.in): ರಾಜ್ಯದಲ್ಲಿ ಇಂದು ಹೊಸದಾಗಿ 75 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ಕೊರೋನಾ ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆಯಾಗಿದ್ದು ಈವರೆಗೆ ಮಹಾಮಾರಿಗೆ 47 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ 809 ಮಂದಿ ಡಿಸ್ಚಾರ್ಜ್ ಆಗಿದ್ದು 1635 ಮಂದಿ ಕೊರೋನಾ ಸೋಂಕಿತರಿಗೆ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು ಉಡುಪಿಯಲ್ಲಿ 27 ಕರೋನಾ ಪ್ರಕರಣ ಪತ್ತೆಯಾಗಿದೆ.. ಹಾಸನ 13, ಉಡುಪಿ 27, ಬೆಂಗಳೂರು 7, ಚಿತ್ರದುರ್ಗ 6, ದಕ್ಷಿಣ ಕನ್ನಡ 6, ಕಲ್ಬುರ್ಗಿ 3, ಚಿಕ್ಕಮಗಳೂರು3, ಯಾದಗಿರಿ 7, ರಾಯಚೂರು ಜಿಲ್ಲೆಯಲ್ಲಿ 1 ಪ್ರಕರಣ ಪತ್ತೆಯಾಗಿದೆ.

Key words: 75 people –coronavirus- today