Wednesday, September 30, 2026

BDA Apartments

71ನೇ ಗಣರಾಜ್ಯೋತ್ಸವ : ಪ್ರಧಾನಿ ಸೇರಿ ಗಣ್ಯಾತಿಗಣ್ಯರ ಶುಭಾಶಯ BDA JK_Adv BDA Adv
Home Front Page 71ನೇ ಗಣರಾಜ್ಯೋತ್ಸವ : ಪ್ರಧಾನಿ ಸೇರಿ ಗಣ್ಯಾತಿಗಣ್ಯರ ಶುಭಾಶಯ

71ನೇ ಗಣರಾಜ್ಯೋತ್ಸವ : ಪ್ರಧಾನಿ ಸೇರಿ ಗಣ್ಯಾತಿಗಣ್ಯರ ಶುಭಾಶಯ

ನವದೆಹಲಿ, ಜನವರಿ 26, 2019 (www.justkannada.in): ದೇಶದಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಈ ನಿಮಿತ್ತ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು ಸೇರಿದಂತೆ ಅನೇಕ ಗಣ್ಯಾತಿಗಣ್ಯರು ರಾಷ್ಟ್ರದ ಜನತೆಗೆ ಶುಭಾಶಯ ಕೋರಿದ್ದಾರೆ. ದೇಶದ ಪ್ರತೀಯೊಬ್ಬ ಪ್ರಜೆಗೂ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್! ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು, ಡಾ.ಮನಮೋಹನ್ ಸಿಂಗ್, ಕೇಂದ್ರ ಸಚಿವರಾದ ಅಮಿತ್ ಷಾ , ರಾಜನಾಥ ಸಿಂಗ್, ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‍ಗಾಂಧಿ, ಗುಲಾಂನಬಿ ಅಜಾದ್, ಮಮತಾ ಬ್ಯಾನರ್ಜಿ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಸಹ ಗಣತಂತ್ರ ದಿವಸದ ಶುಭಾಶಯ ಕೋರಿದ್ದಾರೆ.