ಭಾರತ ಮಹಿಳಾ ಹಾಕಿ ತಂಡಕ್ಕೂ ಕೊರೊನಾ ಕಾಟ: 7 ಆಟಗಾರ್ತಿಯರಿಗೆ ಪಾಸಿಟಿವ್

ಬೆಂಗಳೂರು, ಏಪ್ರಿಲ್ 28, 2021 (www.justkannada.in): ಭಾರತ ಮಹಿಳಾ ಹಾಕಿ ತಂಡಕ್ಕೂ ಕೊರೊನಾ ಕಾಟ ಶುರುವಾಗಿದೆ.

ತಂಡದ ನಾಯಕಿ ರಾಣಿ ರಾಂಪಾಲ್‌ ಸೇರಿ 7 ಆಟಗಾರ್ತಿಯರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌)ದ ಕೇಂದ್ರದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಆಟಗಾರ್ತಿಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.

ಅಭ್ಯಾಸ ಶಿಬಿರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಆಟಗಾರ್ತಿಯರನ್ನು ಏಪ್ರಿಲ್ 24ರಂದು ಪರೀಕ್ಷಿಸಲಾಗಿತ್ತು.

ರಾಣಿ ಜೊತೆಗೆ ಸವಿತಾ ಪೂನಿಯಾ, ಶರ್ಮಿಳಾ ದೇವಿ, ರಂಜನಿ, ನವ್ಜೋತ್‌ ಕೌರ್‌, ನವ್‌ನೀತ್‌ ಕೌರ್‌ ಹಾಗೂ ಸುಶೀಲಾ ಅವರಿಗೆ ಸೋಂಕು ಕಾಣಿಸಿಕೊಂಡಿದೆ.