ಇಂದೋರ್,ಮಾರ್ಚ್,18,2026 (www.justkannada.in): ಭೀಕರ ಅಗ್ನಿ ಅವಘಡ ಸಂಭವಿಸಿ 7 ಮಂದಿ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಇಂದೋರ್ ನ ಬ್ರಜೇಶ್ವರಿ ಅನೆಕ್ಸ್ ಕಾಲೋನಿಯಲ್ಲಿನ ಮನೆಯೊಂದರಲ್ಲಿ ಈ ಘಟನೆ ಸಂಭವಿಸಿದ್ದು ಮಗು ಸೇರಿ 7 ಮಂದಿ ಸಜೀವ ದಹನವಾಗಿದ್ದಾರೆ ಎನ್ನಲಾಗಿದೆ. ಚಾರ್ಜಿಂಗ್ ನಲ್ಲಿದ್ದ ಕಾರು ಹೊತ್ತಿ ಉರಿದು, ಬಳಿಕ ಮನೆಗೆ ಬೆಂಕಿ ಹಬ್ಬಿದ ಪರಿಣಾಮ ಬುಧವಾರ ಮುಂಜಾನೆ ಈ ದುರ್ಘಟನೆ ನಡೆದಿದೆ
ಚಾರ್ಜ್ ಆಗುತ್ತಿದ್ದ ಎಲೆಕ್ಟ್ರಿಕ್ ವಾಹನ (EV) ಕಾರಿಗೆ ಬೆಂಕಿ ತಗುಲಿ, ನಂತರ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡಿದ್ದರಿಂದ ಬೆಂಕಿ ತೀವ್ರವಾಗಿ ಹರಡಿದೆ ಎಂದು ಹೇಳಲಾಗುತ್ತಿದೆ. ಇಂದು ಬೆಳಿಗ್ಗೆ 3:30 ರಿಂದ 4:30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
Key words: 7 people, death, massive, fire disaster







