ನ.2 ರಿಂದ ಬೆಂಗಳೂರಿನಲ್ಲಿ 6ನೇ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ- 2023.

ಬೆಂಗಳೂರು,ಅಕ್ಟೋಬರ್,30,2023(www.justkannada.in):  ನಗರದ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ( BIEC )ದಲ್ಲಿ ನವೆಂಬರ್ 2 ರಿಂದ ಮೂರು‌ ದಿನಗಳ ಕಾಲ ಆರನೇ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ  IMS-2023 ಆಯೋಜನೆಗೊಂಡಿದ್ದು ಇದರಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್ ಇಂಜಿನಿಯರಿಂಗ್ ಸಂಬಂಧಿತ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ಡಿಫೆನ್ಸ್ ಪ್ರೊಡಕ್ಷನ್ ಇಲಾಖೆ ಪ್ರೋತ್ಸಾಹದಡಿಯಲ್ಲಿ ಲಘು ಉದ್ಯೋಗ ಭಾರತಿ, ಕರ್ನಾಟಕ ಮತ್ತು ಐಎಂಎಸ್ ಫೌಂಡೇಷನ್ ಸಹಭಾಗಿತ್ವದಲ್ಲಿ ನಗರದ BIEC ಯಲ್ಲಿ ಆಯೋಜನೆಗೊಂಡಿರುವ  IM-S2023 ಬೃಹತ್ ಪ್ರದರ್ಶನವನ್ನು ನವೆಂಬರ್ 2 ರಂದು ಮಧ್ಯಾಹ್ನ 1 ಗಂಟೆಗೆ ಕೇಂದ್ರ ರಕ್ಷಣಾ‌ ಸಚಿವ ರಾಜನಾಥ್ ಸಿಂಗ್ ‌ಉದ್ಘಾಟಿಸಲಿದ್ದಾರೆ ಎಂದು ಐಎಂಎಸ್ ಫೌಂಡೇಷನ್ ಛೇರ್ಮನ್ ಹೆಚ್.ವಿ. ಎಸ್ ಕೃಷ್ಣ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ, ವಿದೇಶಾಂಗ ರಾಜ್ಯ ಸಚಿವ ವಿ ಮುರಳೀಧರನ್, ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ, ಐಎಂಎಸ್-2023 ಸಲಹಾ ಸಮಿತಿ ಅಧ್ಯಕ್ಷ ಬಾಬಾ ಕಲ್ಯಾಣಿ, L&T ಡಿಫೆನ್ಸ್ ಮುಖ್ಯಸ್ಥ ಅರುಣ್ ಟಿ.ರಾಮಚಂದಾನಿ ಅವರುಗಳು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಐಎಂಎಸ್ ಛೇರ್ಮನ್ ಕೃಷ್ಣ ಹೇಳಿದ್ದಾರೆ.

ನವೆಂಬರ್ 2, 3 ಮತ್ತು 4 ರಂದು ನಡೆಯಲಿರುವ 6ನೇ ಭಾರತ ಮ್ಯಾನುಫ್ಯಾಕ್ಚರಿಂಗ್ ಶೋ IMS-2023 ಪ್ರದರ್ಶನದಲ್ಲಿ ಬಾಹ್ಯಾಕಾಶ ಮತ್ತು ಡಿಫೆನ್ಸ್ ಗೆ ಸಂಬಂಧಿಸಿದಂತೆ ಇತ್ತೀಚಿನ ತಂತ್ರಜ್ಞಾನಗಳು, ಯಂತ್ರೋಪಕರಣಗಳು, ಲಾಜಿಸ್ಟಿಕ್ಸ್, ಏರೋಸ್ಪೇಸ್ , ಡಿಫೆನ್ಸ್ ಇಂಜಿನಿಯರಿಂಗ್, ಆಟೊಮೇಷನ್ ಮತ್ತು ರೊಬೊಟಿಕ್ಸ್, ಎನರ್ಜಿ & ಪರಿಸರ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್ ಮತ್ತು ಜನರಲ್ ಇಂಜಿನಿಯರಿಂಗ್ ಕುರಿತಂತೆ ಪ್ರದರ್ಶನಗಳಿಗೆ  ಇದು ವೇದಿಕೆಯಾಗಲಿದೆ.

ದೇಶ, ವಿದೇಶಿ ಪ್ರತಿನಿಧಿಗಳು, ಕೇಂದ್ರ ಸರ್ಕಾರದ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಮತ್ತು ಅದರ ಇಲಾಖೆಗಳು, ಕಾರ್ಪೊರೇಟ್‌ ಗಳು ಮತ್ತು ಎಂಎಸ್‌ ಎಂಇಗಳು ಭಾಗವಹಿಸಲಿವೆ. ಪ್ರದರ್ಶನದ ಜೊತೆಗೆ, ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ನೀತಿ ನಿರೂಪಕರು, CEO ಗಳು, ಉದ್ಯಮ ನಾಯಕರು, ಡೊಮೇನ್ ತಜ್ಞರು, ವಿಜ್ಞಾನಿಗಳು, ಇಂಜಿನಿಯರ್‌ ಗಳು ತಮ್ಮ ಆಲೋಚನೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. IMS 2023 ,ತಂತ್ರಜ್ಞಾನ ವರ್ಗಾವಣೆ, ನಾವೀನ್ಯತೆಗಳು, ವ್ಯಾಪಾರ ಭೇಟಿಗಳು, ಕೈಗಾರಿಕಾ ಉತ್ಪಾದನೆಯನ್ನು ಹೆಚ್ಚಿಸಲು ಸಂಭಾವ್ಯ ಹೂಡಿಕೆದಾರರನ್ನು ಗುರುತಿಸಲು ಒಂದು ಅನನ್ಯ ವೇದಿಕೆಯಾಗಲಿದೆ.

800ಕ್ಕೂ ಹೆಚ್ಚು ಪ್ರದರ್ಶಕರು, 4500ಕ್ಕೂ ಹೆಚ್ಚು ಪ್ರತಿನಿಧಿಗಳು, 30,000ಕ್ಕೂ ಅಧಿಕ ವ್ಯವಹಾರಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು 30ಕ್ಕೂ ಹೆಚ್ಚು ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳು ಏರ್ಪಡಲಿವೆ. 150ಕ್ಕೂ ಹೆಚ್ಚು ಸಂಬಂಧಿತ ತಜ್ಞರು ವಿಷಯ ಮಂಡಿಸಲಿದ್ದಾರೆ ಎಂದು ಐಎಂಎಸ್ ಛೇರ್ಮನ್ ಕೃಷ್ಷ ವಿವರಿಸಿದರು.

ಮೆಟ್ರೋ ರೈಲಿನಲ್ಲಿ ಬರುವ ಪ್ರತಿನಿಧಿಗಳನ್ನು ಕರೆದೊಯ್ಯಲು ನಾಗಸಂದ್ರ ಮೆಟ್ರೋ ಸ್ಟೇಷನ್ ನಿಂದ ವಾಹನ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ, ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಅಖಿಲ ಭಾರತ ಲಘು ಉದ್ಯೋಗ ಭಾರತಿ ಉಪಾಧ್ಯಕ್ಷ ಶ್ರೀಕಂಠದತ್ತ,ಕಾರ್ಯದರ್ಶಿ ನಾರಾಯಣ ಪ್ರಸನ್ನ, ರಾಜ್ಯ ಉಪಾಧ್ಯಕ್ಷ ಅಶ್ವಥ್ ನಾರಾಯಣ, ಜಂಟಿ ಕಾರ್ಯದರ್ಶಿ ರವಿಕುಮಾರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಸಂಜಯ್ ಭಟ್,ನಾಗರಾಜ್ ಬಿ ಎಸ್ ಉಪಸ್ಥಿತರಿದ್ದರು.

Key words: 6th -India Manufacturing Show- 2023 – Bengaluru- Nov 2