ಭಾರತದಲ್ಲಿ ಶೀಘ್ರವೇ 5G ಸೆಲ್ಯೂಲಾರ್ ಸೇವೆಗಳು ಲಭ್ಯ: 5ಜಿ ಬಗ್ಗೆ ತಿಳಿದಿರಬೇಕಾದ ಕೆಲವು ಮುಖ್ಯ ಅಂಶಗಳು ಹೀಗಿವೆ..

ನವದೆಹಲಿ, ಅಕ್ಟೋಬರ್,1, 2022 (www.justkannada.in): ಭಾರತದ ಮೂರು ಪ್ರಮುಖ ದೂರಸಂಪರ್ಕ ಸೇವಾ ಕಂಪನಿಗಳಾದ ರಿಲೈಯನ್ಸ್ ಜಿಯೊ, ಏರ್‌ಟೆಲ್ ಹಾಗೂ ವಿಐ (ವೋಡಾಫೋನ್-ಐಡಿಯಾ) ಭಾರತದಲ್ಲಿ ಶೀಘ್ರದಲ್ಲೇ 5G ಸೇವೆಗಳನ್ನು ಆರಂಭಿಸುವುದಾಗಿ ಘೋಷಿಸಿವೆ.

ಕ್ಷೇತ್ರದ ಮೂಲಗಳ ಪ್ರಕಾರ, ಈ ಪೈಕಿ ಒಂದು ಅಥವಾ ಎರಡು ಕಂಪನಿಗಳು ಅಕ್ಟೋಬರ್ ತಿಂಗಳಲ್ಲೇ ಅಂದರೆ ದೀಪಾವಳಿಗೂ ಮುಂಚೆಯೇ ವಾಣಿಜ್ಯ ಬಳಕೆಯ 5G ಸೆಲ್ಯೂಲಾರ್ ಸೇವೆಗಳನ್ನು ಆರಂಭಿಸುವ ತಯಾರಿಯಲ್ಲಿದೆ.

5ಜಿ ಸೆಲ್ಯೂಲಾರ್ ಸೇವೆಗಳ ಕುರಿತು ನೀವು ತಿಳಿದುಕೊಂಡಿರಬೇಕಾದಂತಹ ಕೆಲವು ಪ್ರಮುಖ ಅಂಶಗಳು ಇಂತಿವೆ:

ಈಗ ಬರಲಿರುವ 5ಜಿ ಸೇವೆ, ಪ್ರಸ್ತುತ ನಾವು ಬಳಸುತ್ತಿರುವ 4ಜಿ ನೆಟ್‌ ವರ್ಕ್ ಸೇವೆಗಳ ಹೋಲಿಕೆಯಲ್ಲಿ 10 ಪಟ್ಟು ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸಲಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವ ಎಂಎಂವೇವ್ 5ಜಿ ಬ್ಯಾಂಡ್  (mmWave 5G band)ನಂತಲ್ಲದೆ, ಭಾರತದಲ್ಲಿನ ಸೆಲ್ಯೂಲಾರ್ ಸೇವಾ ಕಂಪನಿಗಳು ಸಬ್-6ಜಿಹೆಚ್‌ಝಡ್ 5ಜಿ ರೇಂಜ್ ಅಡಿ ಮಧ್ಯಮ ಹಾಗೂ ಕಡಿಮೆ-ಫ್ರೀಕ್ವೆನ್ಸಿ ಬ್ಯಾಂಡ್‌ ಗಳನ್ನು ಒದಗಿಸಲಿವೆ. ಇವು ಎಂಎಂವೇವ್‌ ಗಿಂತ ಸ್ವಲ್ಪ ನಿಧಾನವಾಗಿದ್ದರೂ ಸಹ, ನೆಟ್‌ವರ್ಕ್ ಟವರ್‌ ಗಳು ದೂರದಲ್ಲಿದ್ದರೂ ಸಹ ತಡೆರಹಿತವಾಗಿ ಸಂಪರ್ಕವನ್ನು ಕಲ್ಪಿಸುತ್ತದೆ ಹಾಗೂ ಒಂದು ವೇಳೆ ನೀವು ಮನೆ ಅಥವಾ ಕಚೇರಿಯ ಒಳಗೆ, ಕಾಂಕ್ರೀಟ್‌ ನ ನಾಲ್ಕು ಗೋಡೆಗಳ ನಡುವೆ ಇದ್ದರೂ ಸಹ ಈಗಿನಂತೆ ಸಿಗ್ನಲ್ ಕಳೆದುಕೊಳ್ಳುವ ಪ್ರಮೇಯ ಕಡಿಮೆಯಾಗುತ್ತದೆ.

ಮತ್ತೊಂದೆಡೆ, ಎಂಎಂವೇವ್ ಅತೀ ವೇಗವನ್ನು ಹೊಂದಿದೆ. ಆದರೆ ಮರದ ಬಾಗಿಲು ಅಥವಾ ಕಿಟಕಿಗಳಿದ್ದರೆ ಸಂಪರ್ಕ ಸಾಧ್ಯ ಕಷ್ಟವಾಗಬಹುದು. ಹಾಗಾಗಿ ಎಂಎಂವೇವ್ ತಂತ್ರಜ್ಞಾನವಿದ್ದರೆ ಸೂಪರ್-ಫಾಸ್ಟ್ ಇಂಟೆರ್‌ ನೆಟ್ ಸೌಲಭ್ಯ ಪಡೆಯಲು ಸೆಲ್ಯೂಲಾರ್ ಟವರ್‌ ಗೆ ಹತ್ತಿರದಲ್ಲೇ ಫೋನ್‌ಗಳನ್ನು ಬಳಸಬೇಕಾಗುತ್ತದೆ.

  • ಏರ್‌ಟೆಲ್ ಇಡೀ ಭಾರತಾದ್ಯಂತ ಸೇವೆಗಳನ್ನು ಒದಗಿಸಲು ಐದು ತರಂಗಗಳನ್ನು (ಬ್ಯಾಂಡ್)ಗಳನ್ನು ಪಡೆದುಕೊಂಡಿದೆ. ೯೦೦ ಎಂಹೆಚ್‌ಝಡ್ (ಎನ್೮), ೧೮೦೦ ಎಂಹೆಚ್‌ಝಡ್, ೨೧೦೦ ಎಂಹೆಚ್‌ಝಡ್ (ಎನ್೧), ೩೩೦ ಎಂಹೆಚ್‌ ಝಡ್ (ಎನ್೭೮), ಹಾಗೂ ೨೬ ಜಿಹೆಚ್‌ ಝಡ್ (ಎನ್೨೫೮)
  • ರಿಲೈಯನ್ಸ್ ಕೂಡ ಐದು ತರಂಗಗಳನ್ನು ಪಡೆದುಕೊಂಡಿದೆ: ೭೦೦ ಎಂಹೆಚ್‌ ಝಡ್ (ಎನ್೨೮), ೮೦೦ ಎಂಹೆಚ್‌ ಝಡ್ (ಎನ್೫), ೧೮೦೦ ಎಂಹೆಚ್‌ ಝಡ್ (ಎನ್೩), ೩೩೦೦ ಎಂಹೆಚ್‌ ಝಡ್ (ಎನ್೭೮) ಹಾಗೂ ೨೬ ಜಿಹೆಚ್‌ ಝಡ್ (ಎನ್೨೫೮)
  • ವೋಡಾಫೋನ್ ಕೇವಲ ಎರಡು 5ಜಿ ತರಂಗಗಳನ್ನು ಪಡೆದುಕೊಂಡಿದೆ: ೩೦೦ ಎಂಹೆಚ್‌ಝಡ್ (ಎನ್೭೮) ಹಾಗೂ ೨೬ ಜಿಹೆಚ್‌ಝಡ್ (ಎನ್೨೫೮)

ನಿಮ್ಮ ೫ಜಿ ಫೋನ್‌ ಗಳು ಈ 5 ಬ್ಯಾಂಡ್‌ ಗಳ ಪೈಕಿ (ಎನ್೮, ಎನ್೨೮, ಎನ್೧, ಎನ್೭೮, ಎನ್೨೫೮) ಯಾವುದಕ್ಕಾದರೂ ಸಪೋರ್ಟ್ ಮಾಡಬಹುದು. ಆ ಮೂಲಕ ನೀವು ಹೈ-ಸ್ಪೀಡ್ ಇಂಟೆರ್‌ ನೆಟ್ ಸೇವೆಗಳನ್ನು ಆನಂದಿಸಬಹುದು.

ಭಾರತದಲ್ಲಿ 5ಜಿ ಸ್ಮಾರ್ಟ್ ಫೋನ್ ಬಳಸುವವರು 1ಜಿಬಿಪಿಎಸ್ ಹಾಗೂ ೧೦ ಜಿಬಿಪಿಎಸ್ ನಡುವೆ ಅತ್ಯಂತ ವೇಗವಾದ ವೈರ್‌ ಲೆಸ್ ಡೌನ್‌ಲೋಡ್‌ಗಳನ್ನು ಮಾಡಿಕೊಳ್ಳಬಹುದು.

ಮೊದಲ ಹಂತದಲ್ಲಿ 5ಜಿ ಸೇವೆಗಳನ್ನು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಒಳಗೊಂಡಂತೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಬಿಡುಗಡೆಗೊಳಿಸಲಾಗುವುದು. ದೂರಸಂಪರ್ಕ ಕಂಪನಿಗಳು ದೇಶದ ಇತರೆ ನಗರಗಳು ಹಾಗೂ ಪಟ್ಟಣಗಲಿಗೆ ೨೦೨೩ರ ಕೊನೆಯಲ್ಲಿ ಅಥವಾ ೨೦೨೪ರ ಆರಂಭದ ತಿಂಗಳುಗಳಲ್ಲಿ 5ಜಿ ಸೇವೆಗಳನ್ನು ವಿಸ್ತರಿಸಬಹುದು.

ನಿಮ್ಮ ಬಳಿ ಹೊಸ 5ಜಿ ಸಿಮ್ ಇರಬೇಕೇ..?

ಬಹುಶಃ ಬೇಕಾಗಿಲ್ಲ. ನಿಮ್ಮ ಫೋನ್‌ ನಲ್ಲಿರುವ ಹಾಲಿ 4ಜಿ-ಎಲ್‌ಟಿಇ ಬೆಂಬಲಿತ ಸಿಮ್ ಭಾರತದ ಯಾವುದೇ ಪ್ರದೇಶದಲ್ಲಾದರೂ ಸಹ 5ಜಿ ಸೆಲ್ಯೂಲಾರ್ ಟವರ್‌ ಗಳೊಂದಿಗೆ ಸಂಪರ್ಕ ಪಡೆಯುವ ಸಾಮರ್ಥ್ಯ ಹೊಂದಿದೆ. ಆದರೆ ನಿಮ್ಮ ಫೋನ್‌ ನಲ್ಲಿ ಎನ್8, ಎನ್28, ಎನ್1, ಎನ್78 ಹಾಗೂ ಎನ್೨೫೮, ಈ ಐದರಲ್ಲಿ ಯಾವುದಾದರೂ ಒಂದು ತರಂಗಾಂತರಕ್ಕೆ ಸಂಪರ್ಕ ಹೊಂದುವ ಸಾಮರ್ಥ್ಯ ಹೊಂದಿರಬೇಕು.

5ಜಿ ಸಂಪರ್ಕದಿಂದ ಬ್ಯಾಟರಿ ಸಾಮರ್ಥ್ಯ ಕುಂಠಿತಗೊಳ್ಳುವುದೇ?

ನೀವು ಸೆಲ್ಯೂಲಾರ್ ಇಂಟೆರ್‌ ನೆಟ್ ಅನ್ನು ಆನ್‌ ನಲ್ಲಿಟ್ಟು ವೀಡಿಯೋಗಳನ್ನು ನೋಡಿದರೆ ನಿಮ್ಮ ಫೋನ್‌ ನ ಬ್ಯಾಟರಿ ಅತೀ ವೇಗವಾಗಿ ಖಾಲಿಯಾಗಬಹುದು. ನಿಮ್ಮ ಫೋನ್‌ ನ ಡೌನ್‌ಲೋಡ್ ವೇಗ ಅತೀ ವೇಗವಾಗಿ ಇರುವುದಾಗಿ ಕಂಡರು, ಬ್ಯಾಟರಿ ಬಹಳ ಬೇಗ ಡಿಸ್ಚಾರ್ಜ್ ಆಗುತ್ತದೆ. ರಿಲೈಯನ್ಸ್ ಜಿಯೊ ಭಾರತದಲ್ಲಿ 5ಜಿ-ಚಾಲಿತ ಏರ್‌ ಫೈಬರ್ ವೈ-ಫೈ ರೌಟರ್ ಅನ್ನು ಪರಿಚಯಿಸುವುದಾಗಿ ಘೋಷಿಸಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: 5G –cellular- services- available – India soon