ಕಬಿನಿ ಡ್ಯಾಂನಿಂದ 50,600  ಕ್ಯೂಸೆಕ್ ನೀರು  ಬಿಡುಗಡೆ: ಮೈಸೂರು ಜಿಲ್ಲೆಯ  ಹಲವು ಕಡೆ ಪ್ರವಾಹ ಭೀತಿ….

ಮೈಸೂರು,ಆ,7,2020(www.justkannada.in):  ಕೇರಳದ ವೈನಾಡು ಭಾಗದಲ್ಲಿ ಮಳೆರಾಯನ ಆರ್ಭಟ ಹೆಚ್ಚಾದ ಹಿನ್ನಲೆ, ಕಬಿನಿ ಡ್ಯಾಂನಿಂದ 50,600  ಕ್ಯೂಸೆಕ್ ನೀರನ್ನ ಹೊರಕ್ಕೆ ಬಿಡಲಾಗಿದ್ದು, ಈ ಹಿನ್ನೆಲೆ ಮೈಸೂರು ಜಿಲ್ಲೆಯ  ಹಲವು ಕಡೆಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಕಬಿನಿ ಡ್ಯಾಂ ನಿಂದ ನೀರು ಹೊರಕ್ಕೆ ಬಿಟ್ಟ ಹಿನ್ನೆಲೆ ಕಬಿನಿ ನದಿ ಪಾತ್ರದಲ್ಲಿ, ನಂಜನಗೂಡು, ಸುತ್ತುರು, ನರಸೀಪುರ ಸೇರಿದಂತೆ ಮೈಸೂರು ಜಿಲ್ಲೆಯ  ಹಲವು ಕಡೆ ಪ್ರವಾಹ ಭೀತಿ ಎದುರಾಗಿದೆ. ಕಬಿನಿ ಜಲಾಶಯಕ್ಕೆ 45,612 ಕ್ಯೂಸೆಕ್ ನೀರು ಒಳಹರಿವು ಇದ್ದು 50,600 ಕ್ಯೂಸೆಕ್ ನೀರನ್ನ ಹೊರ ಬಿಡಲಾಗಿದೆ.50600-cusec-water-released-kabini-dam-mysore-district-floods

ಹೆಚ್. ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಈ ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿಯಾಗಿದ್ದು, ಇಂದಿನ ನೀರಿನ ಮಟ್ಟ 2278.08 ಅಡಿ ಇದೆ, ಒಟ್ಟು 19.52 ಟಿ. ಎಂ. ಸಿ. ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಇಂದು 15.96 ಟಿ. ಎಂ. ಸಿ. ನೀರು ಸಂಗ್ರಹವಾಗಿದೆ.

Key words: 50600 cusec -water -released – Kabini Dam- Mysore district- floods