ಬೆಂಗಳೂರು,ಮಾರ್ಚ್,21,2026 (www.justkannada.in): ಕಂಟೈನರ್ ಹರಿದು ತಾಯಿಯ ಕಣ್ಣೆದುರೇ ನಾಲ್ಕು ವರ್ಷದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪ ನಡೆದಿದೆ.
4 ವರ್ಷದ ನಿಶಿಕಾ ಮೃತಪಟ್ಟ ಬಾಲಕಿ. ಲಾವಣ್ಯ ಎಂಬುವವರು ತಮ್ಮ ಮಗಳು ನಿಶಿಕಾಳ ಕೈಹಿಡಿದುಕೊಂಡು ರಸ್ತೆ ದಾಟುತ್ತಿದ್ದ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ಕಂಟೈನರ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ .
ಡಿಕ್ಕಿಯ ರಭಸಕ್ಕೆ ಮಗು ನಿಶಿಕಾ ಕಂಟೈನರ್ ಚಕ್ರದ ಅಡಿ ಸಿಲುಕಿ ತಾಯಿಯ ಕಣ್ಣೆದುರೇ ಮೃತಪಟ್ಟಿದ್ದಾಳೆ. ತಾಯಿ ಲಾವಣ್ಯ ಅವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.
Key words: 4-year-old girl, died, container







