ಚಿನ್ನದ ಅಂಗಡಿಗೆ ನುಗ್ಗಿ ದೋಚಿದ್ಧ 4.20 ಲಕ್ಷ ರೂ, ಮೌಲ್ಯದ ಚಿನ್ನಾಭರಣ ವಶ: ಆರೋಪಿಗಾಗಿ ಶೋಧ….

ಮೈಸೂರು,ಮಾರ್ಚ್,25,2021(www.justkannada.in):  ಚಿನ್ನದ ಅಂಗಡಿಗೆ ನುಗ್ಗಿ ಅಂಗಡಿಯವನ ಕಣ್ಣಿಗೆ ಖಾರದ ಪುಡಿ ಎರಚಿ ದೋಚಿದ್ದ 4,20,000 ರೂ ಮೌಲ್ಯದ ಚಿನ್ನಾಭರಣವನ್ನ ಮೇಟಗಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು ತಲೆಮರಿಸಿಕೊಂಡಿರುವ ಆರೋಪಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.jk

ರಾಜಸ್ಥಾನ ಮೂಲದ ನರೇಂದ್ರ (25) ಚಿನ್ನಾಭರಣ ದೋಚಿದ್ದ ವ್ಯಕ್ತಿ. ಇದೀಗ ಮೇಟಗಳ್ಳಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ 14 ಚೈನುಗಳು, 1 ಚಿನ್ನದ ಉಂಗುರ ವಶಪಡಿಸಿಕೊಂಡಿದ್ದಾರೆ. ಇನ್ನು ತಲೆಮರಿಸಿಕೊಂಡಿರುವ ಆರೋಪಿ ನರೇಂದ್ರನಿಗಾಗಿ  ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಹೆಬ್ಬಾಳು ಮುಖ್ಯ ರಸ್ತೆಯ ಕೈಲಾಸ್ ಬ್ಯಾಂಕರ್ಸ್ ಅಂಡ್ ಜುವೆಲರ್ಸ್ ಅಂಗಡಿಗೆ ಗಿರಾಕಿಯ ಸೋಗಿನಲ್ಲಿ ನುಗ್ಗಿದ್ದ ನರೇಂದ್ರ ಅಂಗಡಿ ಕೆಲಸದವನ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನಾಭರಣ ದೋಚಿದ್ದನು. 2020 ಡಿಸೆಂಬರ್ 18ರ ಸಂಜೆ 7.30ಕ್ಕೆ ನಡೆದಿದ್ದ ಘಟನೆ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಮೇಟಗಳ್ಳಿ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ವ್ಯಕ್ತಿಯ ಗುರುತು ಪತ್ತೆ ಹಚ್ಚಿ ರಾಜಸ್ಥಾನಕ್ಕೆ ತೆರಳಿದ್ದರು. ಪೊಲೀಸರ ಹುಡುಕಾಟದ ವಿಷಯ ತಿಳಿದು ಆರೋಪಿ ನರೇಂದ್ರ ತಲೆಮರಿಸಿಕೊಂಡಿದ್ದು ನಾಪತ್ತೆಯಾಗಿರುವ ಆರೋಪಿಗಾಗಿ ಶೋಧಕಾರ್ಯ ಮುಂದುವರೆದಿದೆ.

ಹೆಚ್ಚಿನ ಮಾಹಿತಿ ಸಂಗ್ರಹಿಸಿ ಮೈಸೂರಿನ ಸಂಬಂಧಿಕರ ಮನೆಯಲ್ಲಿ ದೋಚಿದ್ದ ಚಿನ್ನಾಭರಣಗಳನ್ನು ಆರೋಪಿ ಬಚ್ಚಿಟ್ಟದ್ದನ್ನು ಪತ್ತೆ ಹಚ್ಚಿ ಪೊಲೀಸರು ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Key words: 4.20 lakhs- worth – gold- jewellery- seized-mysore-police-accused.