36ನೇ ರಾಷ್ಟ್ರೀಯ ಕ್ರೀಡಾಕೂಟ: ಯೋಗಾಸನದಲ್ಲಿ ಬೆಳ್ಳಿ ಪದಕ ಪಡೆದ ಮೈಸೂರಿನ ಕುಮಾರಿ ಖುಷಿ. ಹೆಚ್

ಮೈಸೂರು,ಅಕ್ಟೋಬರ್ ,13,2022(www.justkannada.in): ಇತ್ತೀಚಿಗೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ 36ನೇ  ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೈಸೂರಿನ ಕುಮಾರಿ ಖುಷಿ ಹೆಚ್ ಅವರು ರಿದಮಿಕ್ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕವನ್ನು  ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

36ನೇ  ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಒಟ್ಟು ಒಂದು ಚಿನ್ನ ಎರಡು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗಳಿಸಿದೆ. ಮೊದಲನೇ ಬಾರಿಗೆ ಯೋಗಾಸನ ಕ್ರೀಡೆಯು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಸೇರ್ಪಡೆಯಾಗಿರುವುದು ವಿಶೇಷ.

ಕುಮಾರಿ ಖುಷಿ. ಹೆಚ್ ಇವರು ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾನಿಲಯ ಮತ್ತು ಆಸ್ಪತ್ರೆ  ಇಲ್ಲಿ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು ಹಾಗೂ ಮೈಸೂರಿನ ವಿವೇಕಾನಂದ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಳೆದ 8 ವರ್ಷಗಳಿಂದ ಡಾ. ಪಿ.ಎನ್ ಗಣೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸ ಮಾಡುತ್ತಿದ್ದಾರೆ.  ಯೋಗ ಕ್ಷೇತ್ರದಲ್ಲಿ ಸಂಶೋಧನೆ ಮಾಡಿ ಉತ್ತಮ ಯೋಗ ಶಿಕ್ಷಕಿ ಆಗುವುದು ಇವರ  ಗುರಿಯಾಗಿದೆ. ಅಲ್ಲದೆ ಇವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.

Key words:  36th National Games-Mysore – kumari H.Khushi- won – silver medal -Yogasana.