Saturday, September 19, 2026

BDA Apartments

ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ. ಮೀಸಲು: ಹೊಸ ಸರ್ಕಾರಿ ವಾಹನಗಳ...
Home Front Page ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ. ಮೀಸಲು: ಹೊಸ ಸರ್ಕಾರಿ ವಾಹನಗಳ ಖರೀದಿಗೆ...

ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ. ಮೀಸಲು: ಹೊಸ ಸರ್ಕಾರಿ ವಾಹನಗಳ ಖರೀದಿಗೆ ಕೇಂದ್ರದ ಅನುದಾನ.

ನವದೆಹಲಿ,ಫೆಬ್ರವರಿ,1,2023(www.justkannada.in): 2070ಕ್ಕೆ ಕಾರ್ಬನ್ ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಲಾಗಿದ್ದು, ಕಾರ್ಬನ್ ಮುಕ್ತ ಪರಿಸರಕ್ಕೆ 35,000 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಇಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,  ಗ್ರೀನ್ ಹೈಡ್ರೋಜನ್ ಮಿಷನ್ ಗೆ 19,700 ಕೋಟಿ ರೂಪಾಯಿ ಮೀಸಲು. ಹಸಿರು ಕ್ರಾಂತಿಗೆ ಪಿಎಂ ಪ್ರಣಾಮ್ ಸ್ಕೀಂ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ. ಗೋಬರ್ಧನ್ ಯೋಜನೆ ಅಡಿ 200 ಬಯೋಗ್ಯಾಸ್ ಪ್ಲ್ಯಾಂಟ್. ಜೈವಿಕ ಇಂಧನ, ಜೈವಿಕ ಗೊಬ್ಬರ, ಜೈವಿಕ ಅನಿಲಕ್ಕೆ ಅನುದಾನ. 10 ಸಾವಿರ ಬಯೋ ಇನ್ ಪುಟ್ ಸೆಂಟರ್ ಗಳ ಸ್ಥಾಪನೆ ಮಾಡಲಾಗುವುದು ಎಂದರು.

ಹೊಸ ಸರ್ಕಾರಿ ವಾಹನಗಳ ಖರೀದಿಗೆ ಕೇಂದ್ರದಿಂದ ಅನುದಾನ ನೀಡಲಾಗುತ್ತದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರಿ ವಾಹನಗಳು ಗುಜರಿಗೆ ಹಾಕಲಾಗುತ್ತದೆ ಎಂದರು.

Key words: 35,000 thousand- crores – carbon -free –environment-budget