ದೇಶದಲ್ಲಿ ಒಂದೇ ದಿನ 3,275 ಕೋವಿಡ್ ಪ್ರಕರಣಗಳು ಪತ್ತೆ.

0
3

ನವದೆಹಲಿ,ಮೇ,5,2022(www.justkannada.in):  ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3275 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.

ಇದೇ ಅವಧಿಯಲ್ಲಿ 55 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ನಿನ್ನೆ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 31 ಇತ್ತು. ಕಳೆದ 24 ಗಂಟೆಗಳಲ್ಲಿ 2010 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಹಾಗೆಯೇ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 19,719 ಇದೆ.

ಭಾರತದಲ್ಲಿ ಈಗ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 4,30,91,393ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಕೊವಿಡ್​ 19 ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,23,975 ಇದೆ.  ಹರ್ಯಾಣದಲ್ಲಿ 571, ಕೇರಳದಲ್ಲಿ 386, ಉತ್ತರ ಪ್ರದೇಶದಲ್ಲಿ 198 ಕೇಸ್​​ಗಳು ಮತ್ತು ಮಹಾರಾಷ್ಟ್ರದಲ್ಲಿ 188 ಕೇಸ್​​ಗಳು ದಾಖಲಾಗಿವೆ.

Key words: 3,275 cases –Covid-detected – single day – country.