ರಾಜಭವನದಲ್ಲಿನ ಉದ್ಯಾನವನದ 3 ವರ್ಷಗಳ ನಿರ್ವಹಣೆ ವೆಚ್ಚ ಬರೋಬ್ಬರಿ ರೂ.3.2 ಕೋಟಿ…!  

ಬೆಂಗಳೂರು, ಜೂನ್, 18, 2021 (www.justkannada.in): ಮೂರು ವರ್ಷಗಳ ಅವಧಿಯಲ್ಲಿ ಬೆಂಗಳೂರಿನಲ್ಲಿರುವ ರಾಜ ಭವನದ ಉದ್ಯಾನವನ್ನು ಹೂವುಗಳಿಂದ ಅಲಂಕರಿಸಲು ಬರೋಬ್ಬರಿ ರೂ.4.80 ಲಕ್ಷ ವೆಚ್ಚ ಮಾಡಿರುವ ಆಘಾತ ಉಂಟು ಮಾಡುವ ವಿಷಯ ಬೆಳಕಿಗೆ ಬಂದಿದೆ.jk

ಆರ್‌ಟಿಐ ಅರ್ಜಿಯೊಂದರಿಂದ ಮೂರು ವರ್ಷಗಳಲ್ಲಿ (೨೦೧೪-೧೫ ರಿಂದ ೨೦೧೬-೧೭) ರಾಜ ಭವನದ ನಿರ್ವಹಣೆಗಾಗಿ ಸಾರ್ವಜನಿಕರ ಹಣದಲ್ಲಿ ಬರೋಬ್ಬರಿ ರೂ.3.27 ಕೋಟಿ ವೆಚ್ಚ ಮಾಡಲಾಗಿರುವ ವಿಷಯ ತಿಳಿದು ಬಂದಿದೆ.

ಇದೇ ಅವಧಿಯಲ್ಲಿ ರಾಜ ಭವನದ ಉದ್ಯಾನವನ್ನು ನಿರ್ವಹಿಸುವ ದಿನಗೂಲಿ ನೌಕರರಿಗೆ ನೀಡಿರುವ ವೇತನ ರೂ.೧೧.೫೯ ಲಕ್ಷಗಳಾಗಿದ್ದರೆ, ಉದ್ಯಾನವನದ ಅಭಿವೃದ್ಧಿ, ಪರಿಕಲ್ಪನೆ ಹಾಗೂ ಮಾಸ್ಟರ್ ಪ್ಲಾನ್‌ಗಳಿಗೆ ವೆಚ್ಚವಾಗಿರುವ ಮೊತ್ತ ರೂ.೨.೯೫ ಕೋಟಿ! ವಿವಿಧ ತರಕಾರಿಗಳು, ಗಿಡಗಳು, ಗೊಬ್ಬರ, ಕೆಂಪು ಮಣ್ಣು, ಇತ್ಯಾದಿಗಳಿಗೆ ರೂ.೧೫ ಲಕ್ಷ, ಬ್ರಷ್ ಕಟ್ಟರ್ ಹಾಗೂ ಪವರ್ ಟಿಲ್ಲರ್‌ಗೆ ರೂ.೫೨,೦೦೦ ಹಾಗೂ ರಾಜ್ಯಪಾಲರ ವಸತಿಗೃಹ, ಊಟದ ಹಜಾರ, ಮುಖ್ಯ ಕಚೇರಿ, ವಿಐಪಿ ಲೌಂಜ್ ಒಳಗೊಂಡAತೆ ರಾಜ ಭವನದ ವಿವಿಧ ಭಾಗಗಳಲ್ಲಿ ಇಟ್ಟಿರುವ ಹೂವಿನ ಕುಂಡಗಳನ್ನು ಅಲಂಕರಿಸಲು ಬಳಸಿರುವ ಹೂವುಗಳಿಗಾಗಿ ರೂ.4.80 ಲಕ್ಷ ವೆಚ್ಚ ಮಾಡಲಾಗಿದೆ.

ಕೇವಲ ಉದ್ಯಾನವನ ಅಭಿವೃದ್ಧಿಗಾಗಿ ಸಾರ್ವಜನಿಕರ ಹಣದಿಂದ ಇಷ್ಟು ಬೃಹತ್ ಮೊತ್ತವನ್ನು ಖರ್ಚು ಮಾಡುತ್ತಿರುವ ವಿಷಯದ ಬಗ್ಗೆ ಆರ್‌ಟಿಐ ಕಾರ್ಯಕರ್ತರಾದ ಬೆಳಗಾವಿಯ ಭೀಮಪ್ಪ ಗಢದ್ ಅವರು ಆಘಾತ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಕೇವಲ ಹೂವಿನ ಕುಂಡಗಳಲ್ಲಿ ಇಡುವ ಹೂವುಗಳಿಗಾಗಿಯೇ ರೂ.5 ಲಕ್ಷ ಖರ್ಚು ಮಾಡಿದ್ದಾರೆ ಎಂದರೆ ಆಘಾತವಾಗುತ್ತದೆ ಎಂದಿದ್ದಾರೆ.

2014ರಿಂದಲೂ ಸಾರ್ವಜನರಿಗೆ ರಾಜ್ಯಪಾಲರಾದ ವಜೂಬಾಯಿ ವಾಲಾ ಅವರನ್ನು ಭೇಟಿ ಮಾಡಲು ಏಕೆ ಬಿಡುತ್ತಿಲ್ಲ ಎಂದು ಗಡದ್ ಅವರು ತಿಳಿದುಕೊಳ್ಳಲು ಬಯಸಿದ್ದು, ರಾಜ್ಯಪಾಲರು ಸಾರ್ವಜನಿಕರ ಅಹವಾಲುಗಳಿಗೆ ಪ್ರತಿಕ್ರಿಯಿಸಿರುವುದು ಬಹುತೇಕ ನೋಡೇ ಇಲ್ಲ ಎನ್ನುತ್ತಾರೆ.

ಜೊತೆಗೆ ಗಡದ್ ಅವರು ರಾಜ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಕೆಲಸದ ಶೈಲಿಯನ್ನು ಪ್ರಶ್ನಿಸಿ, ರಾಜ ಭವನವನ್ನು ‘ಜನ-ಸ್ನೇಹಿಯಲ್ಲ’ ಎಂದು ವರ್ಣಿಸಿದ್ದಾರೆ.

ಸುದ್ದಿ ಮೂಲ: ಇಂಡಿಯನ್ ಎಕ್ಸ್ ಪ್ರೆಸ್

Key words: 3 years -maintenance -cost – park – rajabhavan-Rs 3.2 crore.