ಮೈಸೂರಿನಲ್ಲಿ ತಿಂಗಳ ಅವಧಿಯಲ್ಲಿ 3 ಐಶಾರಾಮಿ ಕಾರುಗಳ ಕಳ್ಳತನ.

ಮೈಸೂರು,ಜೂನ್,13,2023(www.justkannada.in): ತಿಂಗಳ ಅವಧಿಯಲ್ಲಿ ಒಂದೇ ಏರಿಯಾದಲ್ಲಿ 3 ಐಶಾರಾಮಿ ಕಾರುಗಳು ಕಳ್ಳತನವಾಗಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

2 ಇನ್ನೋವಾ ಒಂದು ಫಾರ್ಚುನರ್ ಕಾರನ್ನ ಖದೀಮರು ಕಳವು ಮಾಡಿದ್ದಾರೆ. ವಿಜಯನಗರ, ನಿವೇದಿತಾ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ ಕಾರುಗಳ ಕಳ್ಳತನವಾಗಿದೆ. ನಿರ್ಮಿತಿ ಕೇಂದ್ರದ ನಿವೃತ್ತ ನಿರ್ದೇಶಕ ಮಂಜುನಾಥ್ ಅವರು ಮನೆ ಮುಂದೆ ನಿಲ್ಲಿಸಿದ ಇನ್ನೋವಾ ಕ್ರಿಸ್ಟಾ ಕಾರು (12-05-2023), ಉದ್ಯಮಿ ಸಂತೋಷ ಅವರ ಫಾರ್ಚುನರ್ ಕಾರು (13-05-2023), ಮಾಜಿ ಸಚಿವ ಕೋಟೆ ಶಿವಣ್ಣ ಅವರ ಇನ್ನೊವಾ ಕ್ರಿಸ್ಟಾ ಕಾರು. (05-06-2023) ಕಳ್ಳತನವಾಗಿದೆ.

ಕಳ್ಳನ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಿಸಿ ಟಿವಿ ದೃಶ್ಯ ಇದ್ದರೂ ಕಳ್ಳರು ಸಿಕ್ಕಿಬಿದ್ದಿಲ್ಲ. ಹೈಟೆಕ್ ಕಳ್ಳರ ಗ್ಯಾಂಗ್ ಗೆ ಉದ್ಯಮಿಗಳು, ರಾಜಕಾರಣಿಗಳು,ನಿವೃತ್ತ ಅಧಿಕಾರಿಗಳ ಮನೆಯೇ ಟಾರ್ಗೆಟ್ ಆಗಿದೆ. ಈ ಕಾರುಗಳರನ್ನ ಹೆಡೆಮುರಿ ಕಟ್ಟುವುದು ಮೈಸೂರು ಪೊಲೀಸರಿಗೆ ಸವಾಲಾಗಿದೆ.

Key words: 3 luxury cars -stolen – Mysore – month.