2ನೇ ಟೆಸ್ಟ್: ದ. ಆಫ್ರಿಕಾ ವಿರುದ್ದ ಭಾರತಕ್ಕೆ ಹೀನಾಯ ಸೋಲು

ಗುವಾಹಟಿ,ನವೆಂಬರ್,26,2025 (www.justkannada.in):  ಗುವಾಹಟಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲನುಭವಿಸಿದೆ.

ದಕ್ಷಿಣಾ ಆಫ್ರಿಕಾ 408 ರನ್ ಗಳ ಗೆಲುವು ಸಾಧಿಸುವ ಮೂಲಕ 2-0 ಅಂತರದಲ್ಲಿ ಟೆಸ್ಟ್ ಸರಣಿಯನ್ನ ತನ್ನದಾಗಿಸಿಕೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿದ್ದ ಭಾರತ 2ನೇ ಟೆಸ್ಟ್ ಪಂದ್ಯದಲ್ಲಿ  ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ವಿಶ್ವಾಸದಲ್ಲಿತ್ತು. ಆದರೆ ಭಾರತ ತಂಡಕ್ಕೆ ಸೋಲಿನ ಮರ್ಮಾಘಾತವಾಗಿದೆ.

2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್  ನಲ್ಲಿ ದಕ್ಷಿಣಾ ಆಫ್ರಿಕಾವು ಸೆನುರನ್ ಮುತ್ತುಸ್ವಾಮಿ ಶತಕದ ನೆರವಿನಿಂದ  489 ರನ್ ಬಾರಿಸಿತ್ತು. ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಕೇವಲ 201 ರನ್ ಗಳಿಗೆ ಆಲ್ ಔಟ್ ಆಗಿ ಫಾಲೋಆನ್ ಭೀತಿ ಎದುರಿಸಿತು. 288 ರನ್ ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ದಕ್ಷಿಣಾ ಆಫ್ರಿಕಾವು ಭಾರತಕ್ಕೆ 549 ರನ್ ಗಳ ಗುರಿ ನೀಡಿತು.

2ನೇ ಇನ್ನಿಂಗ್ಸ್ ನಲ್ಲಿ ಗುರಿ ಬೆನ್ನತ್ತಿದ ಭಾರತ  140 ರನ್ ಗಳಿಗೆ ಆಲ್ ಔಟ್ ಆಗಿ ಸೋಲನುಭವಿಸಿದೆ. ಈ ಮೂಲಕ ದಕ್ಷಿಣಾ ಆಫ್ರಿಕಾ 408 ಬೃಹತ್ ಜಯ ಸಾಧಿಸಿದೆ.

Key words: 2nd Test,  India, lose, against, South Africa