ದ್ವಿತೀಯ ಪಿಯು ಫಲಿತಾಂಶ: ಮೈಸೂರಿನ ವಿದ್ಯಾರ್ಥಿ ರಾಜ್ಯಕ್ಕೆ 2ನೇ ಟಾಪರ್.

ಮೈಸೂರು,ಏಪ್ರಿಲ್,10,2024 (www.justkannada.in):  ಇಂದು2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಫಲಿತಾಂಶದಲ್ಲಿ  ಮೈಸೂರು ಜಿಲ್ಲೆ 17ನೇ ಸ್ಥಾನಕ್ಕೆ ಕುಸಿದಿದೆ.

ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ, ಉಡುಪಿ ಎರಡನೇ ಸ್ಥಾನದಲ್ಲಿದ್ದು ಮೈಸೂರು 83.13 ರಷ್ಟು ಫಲಿತಾಂಶದ ಮೂಲಕ 17ನೇ ಸ್ಥಾನಕ್ಕೆ ಕುಸಿದಿದೆ.

ಇನ್ನು ಮೈಸೂರಿನ ವಿದ್ಯಾರ್ಥಿ ಊರ್ವೀಶ್  ಪ್ರಶಾಂತ್  ರಾಜ್ಯದ ಎರಡನೇ ಟಾಪರ್  ಆಗಿದ್ದಾನೆ. ಮೈಸೂರಿನ ಕುವೆಂಪುನಗರದಲ್ಲಿರುವ ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿರುವ ಊರ್ವೀಶ್  ಪ್ರಶಾಂತ್ ವಿಜ್ಞಾನ ವಿಭಾಗದಲ್ಲಿ 597 ಅಂಕಗಳೊಂದಿಗೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾನೆ.

Key words: 2nd PU, Result, Mysore, student