ಪ್ರಾಣಿ ದಾಳಿಯಿಂದ ಈ ವರ್ಷದ ಮೊದಲಾರ್ಧದಲ್ಲಿ 28 ಮಂದಿ ಸಾವು- ಅರಣ್ಯ ಸಚಿವ ಈಶ್ವರ್ ಖಂಡ್ರೆ.

ಬೆಂಗಳೂರು,ಸೆಪ್ಟಂಬರ್,5,2023(www.justkannada.in):  ವನ್ಯ ಪ್ರಾಣಿಗಳ ದಾಳಿಯಿಂದ ಈ ವರ್ಷದ ಮೊದಲಾರ್ಧದಲ್ಲಿ 28 ಮಂದಿ ಸಾವನ್ನಪ್ಪಿದ್ದಾರೆ. 15 ದಿನಗಳಲ್ಲಿ 11 ಜನ ಮೃತಪಟ್ಟಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ,  ನಿನ್ನೆ ಹುಲಿ ದಾಳಿಗೆ ಬಾಲಕ ಚರಣ್ ನಾಯ್ಕ್(7)  ಮೃತಪಟ್ಟಿದ್ದಾನೆ. ಮೂರು ದಿನಗಳ ಹಿಂದೆ ವೆಂಕಟೇಶ್ ಕಾಡಾಣೆ ತುಳಿತಕ್ಕೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ. ಮಾನವ ಪ್ರಾಣಿ ಸಂಘರ್ಷದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ಇನ್ನು ವನ್ಯ ಪ್ರಾಣಿಗಳಿಂದ ಹೊರ ಗುತ್ತಿಗೆಯ ಇಬ್ಬರು ನೌಕರರು ಮೃತ ಪಟ್ಟಿದ್ದಾರೆ. ಮುಂದೆ ಸಮಸ್ಯೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಸಮೀಪ ಇರುವ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ವನ್ಯ ಜೀವಿಗಳ ದಾಳಿಯಿಂದ ಮೃತಪಟ್ಟವರಿಗೆ ಪರಿಹಾರ ನೀಡಿದ್ದೇವೆ. ಗಣಿಗಾರಿಕೆಯಿಂದಲೂ ವನ್ಯ ಜೀವಿಗಳು ಕಾಡಿಗೆ ಬರುತ್ತಿವೆ. ಕಾಡಿನಂಚಿನಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲ ಎಂದು  ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

Key words: 28 people -died – animal -attacks – first half – this year – Forest Minister -Ishwar Khandre