ಐದು ತಿಂಗಳಲ್ಲೇ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ: ಸಿಎಂ ಸಿದ್ದರಾಮಯ್ಯಗೆ ಖುರ್ಚಿ ಉಳಿಸಿಕೊಳ್ಳುವುದೇ ಮುಖ್ಯ- ನಳೀನ್ ಕುಮಾರ್ ಕಟೀಲ್.

ವಿಜಯಪುರ,ನವೆಂಬರ್,4,2023(www.justkannada.in): ರಾಜ್ಯದಲ್ಲಿ ಐದು ತಿಂಗಳಲ್ಲಿ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಸಿಎಂ ಸಿದ್ಧರಾಮಯ್ಯಗೆ ತನ್ನ ಖರ್ಚಿ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್ ಕುಮಾರ್ ಕಟೀಲ್ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಳೀನ್ ಕುಮಾರ್ ಕಟೀಲ್, ರೈತರ ರಕ್ಷಣೆ ಮಾಡಿದರೆ ಮಾತ್ರ  ಸಿಎಂ ಸೀಟು ಉಳಿಯುತ್ತದೆ. ಕುರ್ಚಿ ಉಳಿಸಿಕೊಳ್ಳುವುದೇ ಸಿಎಂ ಸಿದ್ದರಾಮಯ್ಯಗೆ ಮುಖ್ಯವಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಬಾರಿ 4000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಾರಿ ಐದು ತಿಂಗಳಲ್ಲೇ 250ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 18 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರದ ನಡುವೆ ಸಿಎಂಗೆ ರಾಜ್ಯದ ರೈತರ ಹಿತರಕ್ಷಣೆ ಮುಖ್ಯವಾಗಿಲ್ಲ ಬ್ರೇಕ್ ಫಾಸ್ಟ್ ಬೇರೆ ಫಾಸ್ಟ್ ಎಲ್ಲ ಮಾಡುತ್ತಿದ್ದಾರೆ ಎಂದು  ನಳೀನ್ ಕುಮಾರ್ ಕಟೀಲ್ ಕಿಡಿಕಾರಿದರು.

Key words: 250 farmers -committed -suicide -five months- CM Siddaramaiah -Naleen Kumar Kateel.