2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಹಾಕಿ ಪಂದ್ಯಾವಳಿಗೆ ಮೈಸೂರು ವಿವಿ ತಂಡ ಆಯ್ಕೆ

ಮೈಸೂರು,ಡಿಸೆಂಬರ್,25,2021(www.justkannada.in):  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಿ.26 ರಿಂದ 30ರವರೆಗೆ ನಡೆಯಲಿರುವ 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಹಾಕಿ ಪಂದ್ಯಾವಳಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.
ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಶುಕ್ರವಾರ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ. ಮಾನಸ ಗಂಗೋತ್ರಿ ಪಿಜಿಎಸ್‌ಇಯ ವಿ.ಎಸ್.ಚಲನ್(ನಾಯಕ), ಕಿರಣ್‌ಕುಮಾರ್, ಕೆ.ಜೆ. ಗಗನ್, ಗಗನ್ ರಾಘವ್, ಮೈಕಾ ಕಾಲೇಜಿನ ಸಚಿನ್ ಸುಬ್ಬಯ್ಯ, ದೇವಯ್ಯ, ಸೇಂಟ್ ಜೋಸಫ್ ಕಾಲೇಜಿನ ಎಂ.ಎಂ.ಚೆಂಗಪ್ಪ, ಬೋಪಯ್ಯ, ಬಿ.ಎಸ್.ಪೂನ್ನಪ್ಪ , ಪಿ.ಅಖೀಲ್, ವಿದ್ಯಾಶ್ರಮ ಕಾಲೇಜಿನ ಅಂಜನ್ ಮಂದಣ್ಣ, ಬೆಳಗೊಳದ ಡಿಪಾಲ್ ಕಾಲೇಜಿನ ಬಿ.ಪಿ.ಅಪ್ಪಚ್ಚು, ನಾಣಯ್ಯ, ಹಾಸನ ಸುಜಲಾ ಕಾಲೇಜಿನ ಕೆ.ಆರ್.ಚೇತನ್, ಕುಶಾಲ್, ಹಾಸನದ ಕುವೆಂಪು ಕಾಲೇಜಿನ ಎಚ್.ಎಸ್.ರೂಪೇಶ್, ಹಾಸನದ ಸರ್ಕಾರಿ ಹೋಮ್ ಸೈನ್ಸ್ ಕಾಲೇಜಿನ ವೈಶಾಕ ಸೋಮಣ್ಣ ತಂಡಕ್ಕೆ ಆಯ್ಕೆಯಾಗಿದ್ದಾರೆ.
ತರಬೇತುದಾರ ಕೆ.ಟಿ.ಮನು, ತಂಡದ ವ್ಯವಸ್ಥಾಪಕ ಎಚ್.ಆರ್.ಗಿರೀಶ್ ಜತೆ ತಮ್ಮ ಯೋಗ ತಂಡ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.