ಲೋಕಾ ಅದಾಲತ್‌ ನಲ್ಲಿ ಒಂದಾದ 20 ಜೋಡಿ ದಂಪತಿಗಳು.

ಮೈಸೂರು,ಸೆಪ್ಟಂಬರ್,30,2021(www.justkannada.in): ಮೈಸೂರಿನಲ್ಲಿ ನಡೆದ ಲೋಕಾ ಅದಾಲತ್ ನಲ್ಲಿ 20 ಜೋಡಿ ದಂಪತಿಗಳು ಒಂದಾಗಿ ಹೊಸ ಬದುಕು ಶುರು ಮಾಡಿದ್ದಾರೆ.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಂ ಎಲ್ ರಘುನಾಥ್ ಸಮ್ಮುಖದಲ್ಲಿ ನಡೆದ ಲೋಕಾ ಅದಾಲತ್ ನಲ್ಲಿ ಜೋಡಿ ದಂಪತಿಗಳು ಪರಸ್ಪರ ಗುಲಾಬಿ ಹೂ ನೀಡುವ ಮೂಲಕ ಹೊಸ ಬದುಕಿಗೆ ಹೆಜ್ಜೆ ಇಟ್ಟ‌ರು. ಜಯನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿಗಳು ಪರಸ್ಪರ ಕೈಹಿಡಿದು ಹೊಸತನದ ನಗೆ ಬೀರಿದರು. ಇನ್ನು ದಂಪತಿಗಳನ್ನು ಒಂದು ಮಾಡಿ ನ್ಯಾಯಾಧೀಶರು ಸಂತಸ ವ್ಯಕ್ತಪಡಿಸಿದರು.

ಹೆಂಡತಿ ಕೈ ಹಿಡಿದ ಸೈನಿಕ ಸಂತೋಷ್ ಕುಮಾರ್ ರಿಂದ ಸಂತಸದ ನುಡಿಗಳನ್ನಾಡಿದರು. ಹಲವಾರು ವರ್ಷಗಳಿಂದ ನನ್ನ ಮಗುವನ್ನು ಕೂಡ ನಾನು ನೋಡಿಲ್ಲ. ಕೋರ್ಟ್ ಕಛೇರಿ ಎಂದು ಜೀವನವೇ ಬೇಜಾರ್ ಆಗಿತ್ತು. ಇದೀಗ ನನ್ನ ಹೆಂಡತಿ ಮಗುವಿನ ಜೊತೆ ಹೊಸ ಜೀವನವನ್ನು ಶುರು ಮಾಡುತ್ತಿದ್ದೇನೆ. ದಯವಿಟ್ಟು ಸಣ್ಣಪುಟ್ಟ ವಿಚಾರಗಳಿಗೆ ಗಂಡ ಹೆಂಡತಿಯರು ಕೋರ್ಟ್ ಗೆ ಬರಬೇಡಿ. ಸ್ವಲ್ಪ ಸಮಯ ತೆಗೆದುಕೊಂಡು ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳಿ. ನರಕಯಾತನೆ, ಅವಮಾನ, ಜಿಗುಪ್ಸೆ ಎಲ್ಲವೂ ಸಾಕಾಗಿದೆ ಎಂದು ಸಲಹೆ ನೀಡಿದರು.

ಇನ್ನು ಒಂದಾದ ಜೋಡಿಗಳಿಗೆ ನ್ಯಾಯಾಧೀಶರಾದ ಎಂ ಎಲ್ ರಘುನಾಥ್ ಸಿಹಿ ಹಂಚಿ ಶುಭಹಾರೈಸಿದರು.

Key words: 20 couples –mysore- lok adalat