2 ಸಾವಿರ ರೂ. ಕೊಡುವುದಾಗಿ ಕಾಂಗ್ರೆಸ್ ಬಹಿರಂಗ ಘೋಷಣೆ: ಕುಕ್ಕರ್ ಹಂಚಿ ಸಿಕ್ಕಿಬಿದ್ದಿದ್ದಾರೆ – ಸಿಎಂ ಬಸವರಾಜ ಬೊಮ್ಮಾಯಿ ಆರೋಪ.

ಬೆಂಗಳೂರು,ಜನವರಿ,25,2023(www.justkannada.in):  ಕಾಂಗ್ರೆಸ್ ಮತದಾರರಿಗೆ 2 ಸಾವಿರ ರೂ. ನೀಡುವುದಾಗಿ ಓಪನ್ ಘೋಷಣೆ ಮಾಡಿದ್ದಾರೆ. ಕುಣಿಗಲ್ ನಲ್ಲಿ ಕುಕ್ಕರ್ ಹಂಚುವ ವೇಳೆ ಸಿಕ್ಕಿಬಿದ್ದಿದ್ದು ಕಮರ್ಷಿಯಲ್ ಟ್ಯಾಕ್ಸ್ ನವರು ದಂಡ ವಿಧಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಫ್ರಿ ಕರೇಂಟ್,  2 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದೆ. ಇದೆಲ್ಲಾ ನೋಡಿದ್ರೆ ಅವರು ಅಪರಾಧಿಗಳೇ. ಕಾಂಗ್ರೆಸ್ ಆಮಿಷ ತೋರಿಸದಂತೆ ಅಲ್ವಾ  ಎಂದು ಪ್ರಶ್ನಿಸಿದರು.

ಕುಣಿಗಲ್ ನಲ್ಲಿ ತಮ್ಮ ಫೋಟೊ ಇರುವ ಕುಕ್ಕರ್ ನೀಡಿದ್ದಾರೆ. ಈ ವೇಳೆ ವಾಣಿಜ್ಯ ತೆರಿಗೆ ಇಲಾಖೆಯವರು ನಾಲ್ವರಿಗೆ  ದಂಡ ಹಾಕಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸೋಲುತ್ತೇವೆ ಅಂತಾ ಗೊತ್ತಾಗಿದೆ. ಕಾಂಗ್ರೆಸ್ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ. ನಾವು ಕಾಂಗ್ರೆಸ್ ನಿಂದ ಪಾಠ ಕಲಿಯಬೇಕಿಲ್ಲ. ಈ  ರೀತಿ ನಾವು ನೂರು ಕಂಪ್ಲೆಂಟ್ ಕೊಡಹುದು ಆದರೆ ಜನ ತೀರ್ಮಾನ ಮಾಡುತ್ತಾರೆ ಎಂದರು.

Key words: 2 thousand -. Congress-open -declaration  – CM Basavaraja Bommai